ಮಂಗಳಾದೇವಿ ವೈಭವದ ರಥೋತ್ಸವ

ಮಂಗಳಾದೇವಿ ವೈಭವದ ರಥೋತ್ಸವ


ಮಂಗಳೂರು: ಶ್ರೀ ಮಂಗಳಾದೇವಿ ಕ್ಷೇತ್ರದಲ್ಲಿ ರವಿವಾರ ರಾತ್ರಿ ವೈಭವದ ರಥೋತ್ಸವ ನೆರವೇರಿತು. ವಿಜಯದಶಮಿ ದಿನದ ಹಿನ್ನೆಲೆಯಲ್ಲಿ ಬೆಳಗ್ಗಿನಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದಿದ್ದು, ಊರ-ಪರವೂರಿನ ಸಾವಿರಾರು ಮಂದಿ ಭಕ್ತರು ಪಾಲ್ಗೊಂಡು ದೇವರ ದರ್ಶನ ಪಡೆದರು.

ಮಂಗಳಾದೇವಿ ಕ್ಷೇತ್ರದಲ್ಲಿ ಬೆಳಗ್ಗೆ ಉಷಾಃಕಾಲ ಪೂಜೆ ನಿತ್ಯ ಪೂಜೆ, ಪಂಚಾಮೃತ ಅಭಿಷೇಕ, ನವಕ ಕಲಶಾಭಿಷೇಕ, ಕಲೊಕ್ತ ಪೂಜೆ, ಧಾನ್ಯಲಕ್ಷ್ಮೀ ಪೂಜೆ, ವಿದ್ಯಾರಂಭ, ತುಲಾಭಾರ ಸೇವೆ, ಮಧ್ಯಾಹ್ನ ಮಹಾಪೂಜೆ, ರಥಾರೋಹಣ, ಶ್ರೀದೇವಿಯ ವೈಭವದ ವಿಜಯದಶಮಿ ಮಹಾರಥೋತ್ಸವ, ರಥ ಸವಾರಿ, ಶಮೀಕಟ್ಟೆ ಪೂಜೆ, ಪಾಲಕಿ ಬಲಿ, ಚೆಂಡೆ ಸುತ್ತು, ವಿಜಯದಶಮಿ ಮಹಾಪೂಜೆ ನೆರವೇರಿತು.

ಇಂದು ಅವಭೃತ ಮಂಗಳ ಸ್ನಾನ ನೆರವೇರಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article