
ದೇಲಂಪಾಡಿ ಯೋಗ ಪ್ರತಿಷ್ಠಾನಕ್ಕೆ ಎರಡು ಪ್ರಥಮ ಸ್ಥಾನ
Monday, October 21, 2024
ಮಂಗಳೂರು: ಕರ್ನಾಟಕ ಯೋಗ ಸಂಸ್ಥೆ ಆಯೋಜಿಸಿದ 30ನೇ ನಾನ್ ಮೆಡಲಿಸ್ಟ್ ಯೋಗಾಸನ ಚಾಂಪಿಯನ್ (2024) ಸ್ಪರ್ಧೆಯು ಬೆಂಗಳೂರಿನ ಓಂಕಾರಾಶ್ರಮದಲ್ಲಿ ಅ.19 ರಂದು ರಂದು ನಡೆಯಿತು.
ಈ ಸ್ಪರ್ಧೆಯಲ್ಲಿ ಮಂಗಳೂರಿನ ದೇಲಂಪಾಡಿ ಯೋಗ ಪ್ರತಿಷ್ಠಾನದ ವಿದ್ಯಾರ್ಥಿಗಳಾದ ಸೈಂಟ್ ಎಲೋಶಿಯಸ್ ಕಾಲೇಜಿನ ತೃತೀಯ ಬಿಕಾಂ ವಿದ್ಯಾರ್ಥಿನಿ 20-25ರ ವಯೋಮಿತಿ ಬಾಲಕಿಯರ ವಿಭಾಗದಲ್ಲಿ ರೋಶನಿ ಶೆಣೈ ಯಂ. ಅವರು ಪ್ರಥಮ ಸ್ಥಾನ ಹಾಗೂ ಮಹಾಲಸಾ ಕಾಲೇಜು ವಿಷುವಲ್ ಆರ್ಟ್ಸ್‌ನ ವಿದ್ಯಾರ್ಥಿನಿ 15-20ರ ವಯೋಮಿತಿ ಬಾಲಕಿಯರ ವಿಭಾಗದಲ್ಲಿ ಶ್ರೀಲಕ್ಷ್ಮೀ ಅವರು ಪ್ರಥಮ ಸ್ಥಾನಗಳಿಸಿದ್ದಾರೆ.
ಇವರು ದೇಲಂಪಾಡಿ ಯೋಗ ಪ್ರತಿಷ್ಠಾನದ ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿಯವರಲ್ಲಿ ಯೋಗ ತರಬೇತಿಯನ್ನು ಪಡೆಯುತ್ತಿದ್ದಾರೆ.