ಮೂಡುಬಿದಿರೆಯಲ್ಲಿ ಕುಲಾಲ ಸಂಘದ 18ನೇ ವಾರ್ಷಿಕ ಮಹಾಸಭೆ: ವಿದ್ಯಾರ್ಥಿ ವೇತನ ವಿತರಣೆ: ಪ್ರತಿಭಾ ಪುರಸ್ಕಾರ, ಸನ್ಮಾನ

ಮೂಡುಬಿದಿರೆಯಲ್ಲಿ ಕುಲಾಲ ಸಂಘದ 18ನೇ ವಾರ್ಷಿಕ ಮಹಾಸಭೆ: ವಿದ್ಯಾರ್ಥಿ ವೇತನ ವಿತರಣೆ: ಪ್ರತಿಭಾ ಪುರಸ್ಕಾರ, ಸನ್ಮಾನ


ಮೂಡುಬಿದಿರೆ: ಶೈಕ್ಷಣಿಕವಾಗಿ ನೆರವು, ಶೈಕ್ಷಣಿಕ ಕ್ಷೇತ್ರದ ಸಾಧಕರನ್ನು ಗುರುತಿಸುವ ಕೆಲಸವನ್ನು ಸಂಘ ಸಂಸ್ಥೆಗಳು ಮಾಡಬೇಕು. ಕುಲಾಲ ಸಮುದಾಯ ವಿದ್ಯಾರ್ಥಿಗಳಿಗೆ, ಸ್ಮರ್ಧಾತ್ಮಕ ಪರೀಕ್ಷೆ, ವ್ಯಕ್ತಿತ್ವ ವಿಕಸನದಂತಹ ತರಬೇತಿ ನೀಡುವ ಮೂಲಕ ಅವರ ವ್ಯಕ್ತಿತ್ವವನ್ನು ರೂಪಿಸಿ, ಉನ್ನತ ಸ್ಥಾನಕ್ಕೆ ಹೋಗುವ ಹಾದಿಯನ್ನು ತೋರಿಸಬೇಕು ಎಂದು ಎಂಆರ್‌ಪಿಎಲ್ ಅರೋಮಟಿಕ್ ಅಡ್ಮಿಷ್ಟ್ರೇಶನ್ ವಿಭಾಗದ ಮೆನೇಜರ್ ಶ್ರೀಶಾ ಎಂ.ಕರ್ಮಕರನ್ ಹೇಳಿದರು, 

ಇಲ್ಲಿನ ಸಮಾಜಮಂದಿರದಲ್ಲಿ ನಡೆದ ಮೂಡುಬಿದಿರೆ ಕುಲಾಲ ಸಂಘ 18ನೇ ವಾರ್ಷಿಕ ಮಹಾಸಭೆ, ವಿದ್ಯಾರ್ಥಿವೇತನ ವಿತರಣಾ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ-ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಸಂಘದ ಕನಸಿನ ಭವನ ನಿರ್ಮಾಣಕ್ಕೆ ಸರ್ಕಾರ, ಕಂಪೆನಿಗಳ ನಿಧಿಗಳಿಂದ ಅನುದಾನ ಒದಗಿಸಲು ಬೇಕಾದ ಮಾರ್ಗದರ್ಶನ ನೀಡುತ್ತೇನೆ ಎಂದರು. 

ಸಂಘದ ಅಧ್ಯಕ್ಷ ಶಂಕರ್ ಕುಲಾಲ್ ಅಧ್ಯಕ್ಷತೆ ವಹಿಸಿದರು. ಉಪನ್ಯಾಸಕಿ ಸಂಗೀತ ಕುಲಾಲ್ ಬೋಳ, ಲೆಕ್ಕಪರಿಶೋಧಕ ಅಭಿನಯ್ ಕುಲಾಲ್ ಮುಖ್ಯ ಅತಿಥಿಯಾಗಿದ್ದರು.

ಸಂಘದ ಗೌರವಾಧ್ಯಕ್ಷ ಸುಂದರ್ ಕುಲಾಲ್ ಕಡಂದಲೆ, ಸುಬ್ಬಯ್ಯ ಎಂ.ಬಂಗೇರ, ಪ್ರಧಾನ ಕಾರ್ಯದರ್ಶಿ ವಿಕಾಸ್ ಎಸ್.ಕುಲಾಲ್, ಉಪಾಧ್ಯಕ್ಷರಾದ ಉಮೇಶ್ ಆರ್.ಮೂಲ್ಯ, ಪೂರ್ಣಿಮಾ ಎ.ಬಂಗೇರ, ಮಹಿಳಾ ಮಂಡಲದ ಅಧ್ಯಕ್ಷೆ ತುಳಸಿ ಪಣಪಿಲ ಉಪಸ್ಥಿತರಿದ್ದರು. 

ಸನ್ಮಾನ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 4ನೇ ಸ್ಥಾನ ಪಡೆದ ಶರಣ್ಯ ಬಂಗೇರ, ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಪ್ರಥಮ ಸ್ಥಾನ ಪಡೆದ ಹೃತಿಕಾ ಕುಲಾಲ್, ಕರ್ನಾಟಕ ರಾಜ್ಯ ಯುವರತ್ನ ಪ್ರಶಸ್ತಿ ಪುರಸ್ಕೃತ ಮೋಹನ್ ಹೊಸ್ಮಾರ್, ಮೂಡುಬಿದಿರೆ ಮೊಸರು ಕುಡಿಕೆಯ ಯಕ್ಷಗಾನೀಯ ಕೃಷ್ಣ ವೇಷಧಾರಿ ಚಂದ್ರಶೇಖರ್ ಕುಲಾಲ್, ಎಸ್‌ಎಸ್‌ಎಲ್‌ಸಿಯಲ್ಲಿ ಶೇ.95 ಅಂಕಗಳನ್ನು ಪಡೆದ ಪ್ರತಿಥಿ ಪಿ.ಬಂಗೇರ ಅವರನ್ನು ಸನ್ಮಾನಿಸಲಾಯಿತು. ಸಂಘದ ಹಿರಿಯರು, ಮಹಾಪೋಷಕರನ್ನು ಗೌರವಿಸಲಾಯಿತು. ಅನಾರೋಗ್ಯ ಪೀಡಿತರಿಗೆ ಧನ ಸಹಾಯ ಮಾಡಲಾಯಿತು. 

ಆಶಾಲತಾ ಉಮೇಶ್ ಕುಲಾಲ್ ಸ್ವಾಗತಿಸಿದರು. ಗಾಯತ್ರಿ ಮೋಹನ್ಚಂದ್ರ ಕಾರ್ಯಕ್ರಮ ನಿರೂಪಿಸಿ, ವಿಜಯ ಕುಮಾರ್ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article