ಸಾಯಿ ಮಾರ್ನಾಡ್ ಸೇವಾ ಸಂಘ ಟ್ರಸ್ಟ್‌ನಿಂದ 43ನೇ ಸೇವಾ ಯೋಜನೆ ಹಸ್ತಾಂತರ

ಸಾಯಿ ಮಾರ್ನಾಡ್ ಸೇವಾ ಸಂಘ ಟ್ರಸ್ಟ್‌ನಿಂದ 43ನೇ ಸೇವಾ ಯೋಜನೆ ಹಸ್ತಾಂತರ


ಮೂಡುಬಿದಿರೆ: ಸಾಯಿ ಮಾರ್ನಾಡ್ ಸೇವಾ ಟ್ರಸ್ಟ್ ಅಮನಬೆಟ್ಟು ಇದರ ವತಿಯಿಂದ ಸೆಪ್ಟೆಂಬರ್ ತಿಂಗಳ 2ನೇ ಸೇವಾ ಯೋಜನೆಯನ್ನು ಪಿತ್ತಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿರುವ ಪುತ್ತೂರು ತಾಲೂಕಿನ ಮಾಡಾವು ನಿವಾಸಿ ಲೋಕನಾಥ್ ಶೆಟ್ಟಿ ಹಾಗೂ ತಲೆಯಲ್ಲಿ ಟ್ಯೂಮರ್ ಹೊಂದಿರುವ ಪುತ್ರ ಭವಿತ್ ಇವರ ಚಿಕಿತ್ಸೆಗಾಗಿ ಸಹಾಯಧನವನ್ನು ಹಸ್ತಾಂತರಿಸಲಾಯಿತು.

ಪುತ್ತೂರು ತಾಲೂಕಿನ ಮಾಡಾವು ನಿವಾಸಿಯಾದ ಲೋಕನಾಥ್ ಶೆಟ್ಟಿ ಅವರಿಗೆ ಪಿತ್ತಕೋಶದಲ್ಲಿ ಕ್ಯಾನ್ಸರ್ ಕಾಣಿಸಿಕೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ಜೊತೆಗೆ ಅವರ ಮಗನಿಗೆ ತಲೆಯಲ್ಲಿ ಟ್ಯೂಮರ್ ಉಂಟಾಗಿದ್ದು ಒಂದೇ ಮನೆಯ ಇಬ್ಬರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಲೋಕನಾಥ್ ಶೆಟ್ಟಿ ಅವರ ಪತ್ನಿ ಸುಷ್ಮಾ ಪಕ್ಕಳ ಅವರು ಗಂಡ ಹಾಗೂ ಮಗನ ವೈದ್ಯಕೀಯ ವೆಚ್ಚಕ್ಕಾಗಿ ಪರದಾಡುತ್ತಿದ್ದು ದೈನಂದಿನ ಖರ್ಚು ವೆಚ್ಚಕ್ಕೂ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಅವರ ಕಷ್ಟಕ್ಕೆ ಸ್ಪಂದಿಸಿ ಸೆಪ್ಟೆಂಬರ್ ತಿಂಗಳ 2ನೇ ಸೇವಾಯೋಜನೆಯನ್ನು ಹಸ್ತಾಂತರಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article