
ಮಂಗಳೂರು ವಿಶ್ವವಿದ್ಯಾನಿಲಯ ಅಂತರ್ ಕಾಲೇಜು ಮಟ್ಟದ ಕನ್ನಡ ಭಾಷಣ ಸ್ಪರ್ಧೆ
Monday, October 21, 2024
ಮೂಡುಬಿದಿರೆ: ಶ್ರೀ ಧವಲಾ ಕಾಲೇಜು, ಮೂಡಬಿದಿರೆಯ ಕನ್ನಡ ವಿಭಾಗವು ‘ಕರ್ನಾಟಕ ಸಂಭ್ರಮ-50’ರ ಸ್ಮರಣೆಯ ಪ್ರಯುಕ್ತ ಮಂಗಳೂರು ವಿಶ್ವ ವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಕನ್ನಡ ಭಾಷಣ ಸ್ಪರ್ಧೆ ನ.30 ರಂದು ನಡೆಯಲಿದೆ. ಭಾಷಣದ ವಿಷಯ ‘ಪ್ರಸ್ತುತ ಕಾಲಘಟ್ಟದಲ್ಲಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಎಷ್ಟು ಪ್ರಸ್ತುತ’ ಎಂದು ಸ್ಪರ್ಧೆಯ ಸಂಯೋಜಕಿ ಮಲ್ಲಿಕಾ ರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.