ಮೂಡುಬಿದಿರೆ: ಇಲ್ಲಿನ ವಲಯ ಅರಣ್ಯ ಇಲಾಖೆಯಲ್ಲಿ ಆಯುಧ ಪೂಜೆಯನ್ನು ಆಚರಿಸಲಾಯಿತು.
ಶಿರ್ತಾಡಿಯ ಅರ್ಚಕ ಶ್ರೀಕಾಂತ್ ಹೊಳ್ಳ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು.
ಸಹಾಯ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ್ ಪಿ., ವಲಯಾರಣ್ಯಾಧಿಕಾರಿ ಕಿರಣ್ ಕುಮಾರ್, ಉಪವಲಯಾರಣ್ಯಾಧಿಕಾರಿ, ಸಾಮಾಜಿಕ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬಂದಿ ವರ್ಗದವರು ಈ ಸಂದರ್ಭದಲ್ಲಿದ್ದರು.