ಅ.9 ರಿಂದ 12 ರವರೆಗೆ ವೈಶ್ಯವಾಣಿ ಸಮಾಜದ ಶ್ರೀ ಲಕ್ಷ್ಮೀ ವೇಂಕಟೇಶ ದೇವಸ್ಥಾನ, ಉಡುಪಿ -ಪುತ್ತೂರು-ಇಲ್ಲಿನ 30ನೇ ವರ್ಷದ ನವರಾತ್ರಿ ಶಾರದೋತ್ಸವ
ಉಡುಪಿ: ಇಲ್ಲಿನ ಸಂತೆಕಟ್ಟೆಯ ಅಂಬಾಗಿಲು ಸಮೀಪದ ವೈಶ್ಯವಾಣಿ ಸಮಾಜದ ಶ್ರೀ ಲಕ್ಷ್ಮೀ ವೇಂಕಟೇಶ ದೇವಸ್ಥಾನ, ಉಡುಪಿ -ಪುತ್ತೂರು- ಇಲ್ಲಿನ 30ನೇ ವರ್ಷದ ನವರಾತ್ರಿ ಶಾರದೋತ್ಸವವು ಅ.9 ರಿಂದ ಆರಂಭಗೊಂಡು 12ರ ವರೆಗೆ ನಡೆಯಲಿದೆ.
ಅ.9 ರಂದು ಬೆಳಿಗ್ಗೆ ಶಾರದಾ ದೇವಿಯ ವಿಗ್ರಹದ ಪ್ರಾಣ ಪ್ರತಿಷ್ಠೆ, ಮಧ್ಯಾಹ್ನ 12.30ಕ್ಕೆ ಮಹಾ ಪೂಜೆ, ತೀರ್ಥ ಪ್ರಸಾದ ವಿತರಣೆ, ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಿತು.
ಅ.11ರಂದು ಬೆಳಿಗ್ಗೆ 8.30ಕ್ಕೆ ಪ್ರಾರ್ಥನೆ, ಚಂಡಿಕಾಯಾಗ ಆರಂಭ, ಮಧ್ಯಾಹ್ನ 12.30ಕ್ಕೆ ಪೂರ್ಣಾಹುತಿ, ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಮಹಾ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿರುವುದು.
ಸಂಜೆ ಭಜನೆ ಕಾರ್ಯಕ್ರಮ ಹಾಗೂ ರಾತ್ರಿ 8 ಗಂಟೆಗೆ ರಂಗಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಲಿದೆ.
ಅ.12 ರಂದು ವಿಜಯ ದಶಮಿ ಪ್ರಯುಕ್ತ ಬೆಳಿಗ್ಗೆ 7 ಗಂಟೆಗೆ ಶಾರದಾ ದೇವಿಯ ಸನ್ನಿಧಿಯಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ಕಾರ್ಯಕ್ರಮ ನಡೆಯಲಿರುವುದು.
ಮಧ್ಯಾಹ್ನ 12.30ಕ್ಕೆ ಮಹಾ ಪೂಜೆ, ಪ್ರಸಾದ ವಿತರಣೆ ಹಾಗೂ ಸೇವಾ ಕರ್ತರಿಂದ ಅನ್ನಸಂತರ್ಪಣೆ ನಡೆಯಲಿದೆ.
ಮಧ್ಯಾಹ್ನ ವಿಸರ್ಜನೆ ಪೂಜೆ ಹಾಗೂ ಸಂಜೆ 4 ಗಂಟೆಗೆ ಶಾರದಾ ದೇವಿಯ ವಿಗ್ರಹವನ್ನು ಪುರ ಮೆರವಣಿಗೆಯೊಂದಿಗೆ ಕಲ್ಯಾಣಪುರ ಸುವರ್ಣ ನದಿಯಲ್ಲಿ ಜಲಸ್ತಂಭನ ಮಾಡಲಾಗುವುದು ಎಂದು ದೇವಳದ ಪ್ರಕಟಣೆಯಲ್ಲಿ ತಿಳಿಸಿದೆ.