ದೊಡ್ಡಣಗುಡ್ಡೆ ಕ್ಷೇತ್ರಕ್ಕೆ ಕೃಷ್ಣಾಪುರಶ್ರೀ ಭೇಟಿ
Saturday, October 12, 2024
ಉಡುಪಿ: ಶರನ್ನವರಾತ್ರಿ ಸಂದರ್ಭದಲ್ಲಿ ದೊಡ್ಡಣಗುಡ್ಡೆ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರಕ್ಕೆ ಕೃಷ್ಣಾಪುರ ಮಠಾಧೀಶ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಭೇಟಿ ನೀಡಿದರು.
ಶ್ರೀಗಳನ್ನು ಗೌರವಪೂರ್ವಕವಾಗಿ ಕ್ಷೇತ್ರದ ಧರ್ಮದಶ್ರೀ ಶ್ರೀ ರಮಾನಂದ ಗುರೂಜಿ ಸ್ವಾಗತಿಸಿದರು.
ಕ್ಷೇತ್ರದ ಎಲ್ಲಾ ದೇವರ ದರ್ಶನ ಮಾಡಿದ ಶ್ರಿಪಾದರು, ದೇವರಿಗೆ ಮಂಗಳಾರತಿ ಬೆಳಗಿದರು. ಕ್ಷೇತ್ರದ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಶ್ರೀ ಗುರೂಜಿ ದಂಪತಿಗೆ ಫಲ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.
ಕ್ಷೇತ್ರದಲ್ಲಿ ನೆರೆದ ಎಲ್ಲಾ ಭಕ್ತರಿಗೂ ಫಲಮಂತ್ರಾಕ್ಷತೆ ನೀಡಿ ಯಾಗ ಮಂಟಪದಲ್ಲಿ ನೆರವೇರಿದ ಜೋಡಿ ಚಂಡಿಕಾ ಯಾಗ ವೀಕ್ಷಿಸಿದರು. ಸಕಲ ಗೌರವಗಳೊಂದಿಗೆ ಶ್ರೀಗಳನ್ನು ಬೀಳ್ಕೊಡಲಾಯಿತು ಎಂದು ಕ್ಷೇತ್ರ ಉಸ್ತುವಾರಿ ಕುಸುಮ ನಾಗರಾಜ್ ತಿಳಿಸಿದ್ದಾರೆ.