ಸ್ವಯಂಪ್ರೇರಿತ ರಕ್ತದಾನಕ್ಕೆ ಕೆ. ಜಯಪ್ರಕಾಶ ಹೆಗ್ಡೆ ಕರೆ

ಸ್ವಯಂಪ್ರೇರಿತ ರಕ್ತದಾನಕ್ಕೆ ಕೆ. ಜಯಪ್ರಕಾಶ ಹೆಗ್ಡೆ ಕರೆ

ಉಡುಪಿ: ಜೀವ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ರಕ್ತದ ಕೊರತೆ ಇಲ್ಲಿನ ಜಿಲ್ಲಾಸ್ಪತ್ರೆಯ ರಕ್ತನಿಧಿಯಲ್ಲಿದ್ದು, ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವ ಮೂಲಕ ರಕ್ತದ ಕೊರತೆಯನ್ನು ನಿವಾರಿಸುವಂತೆ ಮಾಜಿ ಸಂಸದ ಕೆ. ಜಯಪ್ರಕಾಶ ಹೆಗ್ಡೆ ಸಲಹೆ ನೀಡಿದರು.

ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆ ಸಹಯೋಗದೊಂದಿಗೆ ಭಾನುವಾರ ಕಾಂಗ್ರೆಸ್ ಭವನದಲ್ಲಿ ನಡೆದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಅಭ್ಯಾಗತರಾಗಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕುಮಾರ್ ಕೊಡವೂರು, ರಕ್ತದಾನ ಸರ್ವಶ್ರೇಷ್ಠ ದಾನವಾಗಿದ್ದು, ರಕ್ತಕ್ಕೆ ಪರ‍್ಯಾಯ ಇನ್ನೊಂದಿಲ್ಲ ಎಂದರು.

ಕಾಂಗ್ರೆಸ್ ನಾಯಕರಾದ ಮುನಿಯಾಲು ಉದಯ್ ಶೆಟ್ಟಿ, ಎಂ.ಎ. ಗಫೂರ್, ವೆರೋನಿಕಾ ಕರ್ನೇಲಿಯೋ, ಫಾ. ವಿಲಿಯಮ್ ಮಾರ್ಟಿಸ್, ಪ್ರಖ್ಯಾತ್ ಶೆಟ್ಟಿ, ಮಹಾಬಲ ಕುಂದರ್, ಚಂದ್ರಿಕಾ ಶೆಟ್ಟಿ, ಅಣ್ಣಯ್ಯ ಶೇರಿಗಾರ್, ಕೇಶವ್ ಕೋಟ್ಯಾನ್, ಭಾಸ್ಕರ ರಾವ್ ಕಿದಿಯೂರು ಮೊದಲಾದವರು ನೇತೃತ್ವ ವಹಿಸಿದ್ದರು.

ಶಿಬಿರದಲ್ಲಿ ಸುಮಾರು 148 ಯೂನಿಟ್ ರಕ್ತ ಸಂಗ್ರಹವಾಯಿತು.

ಪಕ್ಷ ಪ್ರಮುಖರಾದ ಪ್ರಸಾದ್‌ರಾಜ್ ಕಾಂಚನ್, ಕೃಷ್ಣಮೂರ್ತಿ ಆಚಾರ್ಯ, ಆನಂದ ಪೂಜಾರಿ, ಚಂದ್ರಮೋಹನ್, ವಿಜಯ್ ಪೂಜಾರಿ, ಸತೀಶ್ ಪುತ್ರನ್, ಯುವರಾಜ್, ರೋಶನ್ ಶೆಟ್ಟಿ, ಸೌರಭ್ ಬಲ್ಲಾಳ್, ಸಜ್ಜನ್ ಶೆಟ್ಟಿ, ಕುಶಲ್ ಶೆಟ್ಟಿ, ದಿನಕರ್ ಹೇರೂರು, ಪ್ರಶಾಂತ್ ಸುವರ್ಣ, ಉದಯ್ ಆಚಾರ್ಯ, ಮಮತಾ ಶೆಟ್ಟಿ, ಕುಸುಮಾ, ವತ್ಸಲಾ, ಸಂಧ್ಯಾ ತಿಲಕ್‌ರಾಜ್, ಅರ್ಚನಾ, ಭರತ್, ಆಶಾ ಚಂದ್ರಶೇಖರ್, ಶರತ್ ಶೆಟ್ಟಿ, ವಿಶ್ವಾಸ್ ಅಮೀನ್ ಮೊದಲಾದವರಿದ್ದರು.

ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿಗಳಾದ ಸತೀಶ್ ಕೊಡವೂರು ನಿರೂಪಿಸಿದರು. ಉಡುಪಿ ಬ್ಲಾಕ್ ಎಸ್.ಸಿ ಘಟಕ ಅಧ್ಯಕ್ಷ ಗಣೇಶ್ ನೆರ್ಗಿ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article