ಪ್ರವಾಹದಲ್ಲಿ ಕೊಚ್ಚಿಹೋದ ಮಹಿಳೆಯ ಶವ ಪತ್ತೆ

ಪ್ರವಾಹದಲ್ಲಿ ಕೊಚ್ಚಿಹೋದ ಮಹಿಳೆಯ ಶವ ಪತ್ತೆ

ಉಡುಪಿ: ಭಾನುವಾರ ಸಂಜೆ ಹೆಬ್ರಿ ತಾಲೂಕಿನ ಮುದ್ರಾಡಿ ಗ್ರಾಮದ ಬಲ್ಲಾಡಿಯಲ್ಲಿ ಸಂಭವಿಸಿದ ಮೇಘಸ್ಪೋಟದಿಂದಾಗಿ ಉಂಟಾದ ಹಠಾತ್ ಪ್ರವಾಹದಲ್ಲಿ ಕೊಚ್ಚಿಹೋದ ಮಹಿಳೆಯ ಶತ ಸೋಮವಾರ ಪತ್ತೆಯಾಗಿದೆ.

ಭಾರೀ ಪ್ರವಾಹಕ್ಕೆ ಚಂದ್ರಾ ಗೌಡ್ತಿ (85) ಸಿಲುಕಿ ಕೊಚ್ಚಿಹೋಗಿದ್ದರು. ಇಂದು ಮುಂಜಾನೆ ಬಲ್ಲಾಡಿ ಸಮೀಪದ ಗದ್ದೆ ಬಳಿ ಅವರ ಶವ ಪತ್ತೆಯಾಗಿದೆ. ಇಂದು ಪರಿಸ್ಥಿತಿ ಸುಧಾರಿಸಿದ್ದು, ಬ್ರಹ್ಮಗುಂಡಿ ನದಿಯಲ್ಲಿ ಪ್ರವಾಹ ತಗ್ಗಿದೆ. ಆದರೆ, ಹಾನಿ ಕಣ್ಣಿಗೆ ರಾಚುತ್ತಿದೆ.

ಇಂದು ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣವಿದ್ದು, ಸಂಜೆ ವೇಳೆಗೆ ಕೆಲವೆಡೆಗಳಲ್ಲಿ ಗುಡುಗು ಸಹಿತ ಅಲ್ಪ ಮಳೆಯಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article