ಜಾಮೀನು ನೀಡದಿರಲು ಆಗ್ರಹ
Monday, October 14, 2024
ಉಡುಪಿ: ಅಂಬೇಡ್ಕರ್, ಸಂವಿಧಾನ ಹಾಗೂ ದಲಿತ ಸಮುದಾಯವನ್ನು ನಿಂದಿಸಿರುವ ಹಿಂದೂ ಜಾಗರಣ ವೇದಿಕೆಯ ಉಚ್ಚಾಟಿತ ಜಿಲ್ಲಾಧ್ಯಕ್ಷ ಉಮೇಶ ನಾಯ್ಕ್ ಸೂಡ ಅವರಿಗೆ ನ್ಯಾಯಾಲಯ ಜಾಮೀನು ನೀಡಕೂಡದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ರಾಜ್ಯ ಸಂಘಟನಾ ಸಂಚಾಲಕರಾದ ಸುಂದರ ಮಾಸ್ತರ್ ಮನವಿ ಮಾಡಿದ್ದಾರೆ.
ಆಮಂತ್ರಣ ಪತ್ರಿಕೆಯೊಂದರಲ್ಲಿ ಅಂಬೇಡ್ಕರ್ ಭಾವಚಿತ್ರ ಮುದ್ರಿಸದಂತೆ ಹಾಗೂ ಸಂವಿಧಾನ ಮತ್ತು ದಲಿತರನ್ನು ಹೀನ ಪದಗಳಿಂದ ನಿಂದಿಸಿರುವ ಉಮೇಶ ನಾಯ್ಕ್ ಅವರಿಗೆ ಯಾರೂ ಕೂಡ ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು. ಆತ ಜಾಮೀನು ಪಡೆದು ಹೊರಬಂದಲ್ಲಿ ಸಮಾಜದ ಸ್ವಾಸ್ಥ್ಯ ಕೆಡಿಸಿ ಜಾತಿ ಜಾತಿಗಳ ಮಧ್ಯೆ ಹಾಗೂ ಸಮುದಾಯಗಳ ಮಧ್ಯೆ ಗಲಾಟೆ ಎಬ್ಬಿಸುವ ಸಾಧ್ಯತೆಗಳಿವೆ. ಈ ಬಗ್ಗೆ ಈಗಾಗಲೇ ಮಾಹಿತಿ ಬಂದಿದೆ ಎಂದು ಸುಂದರ ಮಾಸ್ತರ್ ತಿಳಿಸಿದ್ದಾರೆ.