ಕೃಷಿ ತಂತ್ರಜ್ಞಾನ ಮತ್ತು ಗ್ರಾಮೀಣಾಭಿವೃದ್ಧಿ ಬಗ್ಗೆ ಹ್ಯಾಕಥಾನ್
ಉಜಿರೆ: ಶ್ರೀ ಧರ್ಮಸ್ಧಳ ಮಂಜುನಾಥೇಶ್ವರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಡಿಲೈತ್ ಬೆಂಗಳೂರು ಹಾಗೂ ಐಎಸ್‌ಟಿಇ ಸಹಭಾಗಿತ್ವದೊಂದಿಗೆ ಕೃಷಿ ತಂತ್ರಜ್ಞಾನ ಮತ್ತು ಗ್ರಾಮೀಣಾಭಿವೃದ್ಧಿ ಎಂಬ ವಿಷಯದ ಕುರಿತು ಸೆ.27 ಮತ್ತು 28 ರಂದು ‘ಇನೊವೇಟ್-ಥಾನ್’ ಎನ್ನುವ ಎರಡು ದಿನದ ಹ್ಯಾಕಥಾನ್ ನಡೆಯಿತು.
ಮುಖ್ಯ ಅತಿಥಿಯಾಗಿ ಬೆಂಗಳೂರಿನ ಆರ್ಕಿಟೆಕ್ಟ್ ಇನ್ಫೋಸಿಸ್‌ನ ಹಿರಿಯ ತಾಂತ್ರಿಕ ಕಾಟಮಯ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ, ವಿದ್ಯಾರ್ಥಿಗಳು ದೈನಂದಿನ ಸಮಸ್ಯೆಗಳಿಗೆ ತಾಂತ್ರಿಕ ಹಿನ್ನಲೆಯಲ್ಲಿ ಪರಿಣಾಮಕಾರಿಯಾದ ಪರಿಹಾರ ಕಂಡುಕೊಳ್ಳುವಂತೆ ಹಾಗೂ ನೂತನ ಉತ್ಪನ್ನಗಳ ಅಭಿವೃದ್ಧಿಯೆಡೆಗೆ ಆಲೋಚಿಸಲು ಅಗತ್ಯವಿರುವ ಕೌಶಲ್ಯಗಳ ಬಗ್ಗೆ ತಿಳಿಸಿದರು.
ಡಿಲೈತ್ ಬೆಂಗಳೂರಿನ ಸಹ ಸಂಸ್ಥಾಪಕ ಅರುಣ್‌ರಾಜ್ ಪುರೋಹಿತ್ ಹ್ಯಾಕಥಾನ್‌ನ ಪ್ರಾಮುಖ್ಯತೆ ತಿಳಿಸಿದರು. ಸೆ.28 ರಂದು ನಡೆದ ಸಮಾರೋಪ ಸಮಾರಂಭದಲ್ಲಿ ಹ್ಯಾಕಥಾನ್ ಸ್ಫರ್ಧೆಯಲ್ಲಿ ವಿಜೇತರಿಗೆ ಕಾಟಮಯ್ಯ ಅವರು ನಗದು ಬಹುಮಾನ ವಿತರಿಸಿದರು.
ಮಂಗಳೂರಿನ ಬ್ಯಾಕ್‌ಎಂಡ್‌ನ ಡೆವಲೊಪ್ಮೆಂಟ್ ಇಂಜಿನಿಯರ್ ದೀಪಕ್, ಮಂಗಳೂರಿನ 7ಎಡ್ಜ್‌ನ ಹಿರಿಯ ನೇಮಕಾತಿ ಅಧಿಕಾರಿ ಅರ್ಪಿತಾ ತೀರ್ಪುಗಾರರಾಗಿ ಸಹಕರಿಸಿದರು.
ಕಾಲೇಜಿನ 23 ತಂಡಗಳು ಬಾಗವಹಿಸಿದ್ದವು. ಉಪಾನ್ಯಾಸಕಿ ಲಾರೈನ್ ಕಾರ್ಯಕ್ರಮ ನಿರೂಪಿಸಿದರು. ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಡಾ. ಗಿರೀಶ್ ಕುಮಾರ್ ಉಪಸ್ಥಿತರಿದ್ದರು. ಸಿವಿಲ್ ವಿಭಾಗದ ಸಹ ಪ್ರಾದ್ಯಾಪಕರಾದ ವಿನಯ್ ಮತ್ತು ರಾಮ್ ಪ್ರಸಾದ್ ಕಾರ್ಯಕ್ರಮ ಸಂಯೋಜಿಸಿದ್ದರು.