ಮೇಯಲು ಬಿಟ್ಟಿದ್ದ ಆಡು ಕಳವು

ಮೇಯಲು ಬಿಟ್ಟಿದ್ದ ಆಡು ಕಳವು

ಉಳ್ಳಾಲ: ಉಳ್ಳಾಲ ಮೇಯಲು ಬಿಟ್ಟಿದ್ದ  ಎರಡು ಆಡುಗಳನ್ನು ಕಳವುಗೈದ ಘಟನೆ ಕಲ್ಲಾಪು ಅಜಾದ್ ಗ್ರೌಂಡ್ ಬಳಿ ನಡೆದಿದೆ.

ಕಲ್ಲಾಪು ಪಟ್ಲ ನಿವಾಸಿ ಅಬ್ದುಲ್ ಸಮದ್ ಅ.6 ರಂದು ಎರಡು ಆಡುಗಳನ್ನು ಮೇಯಲು ಬಿಟ್ಟಿದ್ದರು. ಈ ಆಡು ವಾಪಸು ಬಾರದೇ ನಾಪತ್ತೆಯಾಗಿವೆ. ಇದನ್ನು

ಕಳ್ಳರು ಕಳವುಗೈದು ಹೋಗಿರಬೇಕು ಎಂದು ಆರೋಪಿಸಿ ಅವರು ಮಂಗಳವಾರ ಠಾಣೆಗೆ ದೂರು ನೀಡಿದ್ದಾರೆ. ಕಳವಾದ ಆಡುಗಳ ಮೌಲ್ಯ 30 ಸಾವಿರ ಎಂದು ಅಂದಾಜಿಸಲಾಗಿದೆ. 

ಇದನ್ನು ಸ್ಥಳೀಯ ಇಬ್ಬರು ಕಳವುಗೈದಿರಬೇಕು ಎಂಬ ಶಂಕೆ ಇದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article