
ಅಂಗಡಿಗೆ ನುಗ್ಗಿದ ಲಾರಿ
Tuesday, November 12, 2024
ಬಂಟ್ವಾಳ: ಇಂಟರ್ ಲಾಕ್ ಹೇರಿಕೊಂಡು ಬರುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಅಂಗಡಿಯೊಳಗೆ ನುಗ್ಗಿದ ಘಟನೆ ಬಂಟ್ವಾಳ ತಾಲೂಕಿನ ಹೊಕ್ಕಾಡಿಗೋಳಿ ಎಂಬಲ್ಲಿ ಮಂಗಳವಾರ ಸಂಜೆ ನಡೆದಿದೆ.
ಇದರ ಪರಿಣಾಮ ಅಂಗಡಿಯ ಗೋಡೆ ಹಾಗೂ ಕೆಲ ಸಾಮಾಗ್ರಿ ಹಾನಿಗೀಡಾಗಿದ್ದು, ಚಾಲಕ,ಅಂಗಡಿಯ ಮಾಲಕ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಅಂಗಡಿಯಲ್ಲಿ ನೇತು ಹಾಕಲಾಗಿದ್ದ ಬಾಳೆ ಹಣ್ಣು ಬಜ್ಜಿಯಾದರೆ, ತಿಂಡಿತಿನಸಿನ ಪ್ಯಾಕೇಟ್ ಗಳು ಚೆಲ್ಲಾ ಪಿಲ್ಲಿಯಾಗಿದೆ ಎಂದುಬತಿಳಿದು ಬಂದಿದೆ.