ಬೆಳ್ತಂಗಡಿ: ಮೂವರು ವಿದ್ಯಾರ್ಥಿಗಳು ನೀರುಪಾಲಾದ ಘಟನೆ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ನಡ್ತಿಕಲ್ಲು ಎಂಬಲ್ಲಿ ಇಂದು ಸಂಜೆ ನಡೆದಿದೆ.
ಮೃತ ಯುವಕರು ಲಾರೆನ್ಸ್(21), ಸೂರಜ್ (19) ಹಾಗೂ ಜೈಸನ್ (19) ಎಂದು ಗುರುತಿಸಲಾಗಿದೆ.
ಮಂಗಳೂರಿನ ನರ್ಸಿಂಗ್ ಕಾಲೇಜೊಂದರ ವಿದ್ಯಾರ್ಥಿಗಳು ವೇಣೂರು ಬಳಿಯ ಸ್ನೇಹಿತನ ಮನೆಗೆ ಬಂದಿದ್ದು ನಂತರ ಸಮೀಪದ ನದಿಗೆ ಸ್ನಾನಕ್ಕೆಂದು ತೆರಳಿದ್ದು, ಈ ವೇಳೆ ದುರ್ಘಟನೆ ನಡೆದಿದೆ. ವೇಣೂರು ಪೊಲೀಸರು ಸ್ಥಳಕ್ಕೆ ತೆರಳಿದ್ದು ಪರಿಶೀಲನೆ ನಡೆಸುತಿದ್ದಾರೆ.