ಧರ್ಮಸ್ಥಳದಲ್ಲಿ ಶಿವ ನವರಸ ಲಾಸ್ಯ

ಧರ್ಮಸ್ಥಳದಲ್ಲಿ ಶಿವ ನವರಸ ಲಾಸ್ಯ


ಧರ್ಮಸ್ಥಳ: ನವರಸಗಳಾದ ರೌದ್ರ, ಹಾಸ್ಯ, ಭೀಭತ್ಸ,ಭಯಾನಕ, ಕರುಣ, ವೀರ, ಹಾಸ್ಯ, ಅದ್ಭುತ, ಶೃಂಗಾರ ರಸಗಳ ಮೂಲಕ ಶಿವನ ವಿರಾಟ್ ರೂಪವನ್ನು ನೃತ್ಯದಲ್ಲಿ ನಿರೂಪಿಸಿದವರು ವಿದುಷಿ ದೀಪಾ ಭಟ್ ನೇತೃತ್ವದ ನೃತ್ಯ ಕುಟೀರ ತಂಡ.

ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವದ ವಸ್ತು ಪ್ರದರ್ಶನ ಮಂಟಪದಲ್ಲಿ ಗುರುವಾರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭರತನಾಟ್ಯದ ಮುಲಕ ಶಿವನನ್ನು ಆರಾಧಿಸಿ ಜನರ ಮನಸೆಳೆದರು.

ನಟರಾಜನನ್ನು ಸ್ತುತಿಸುವ ಪುಷ್ಪಾಂಜಲಿಯೊಂದಿಗೆ ನೃತ್ಯ ಕಾರ್ಯಕ್ರಮ ಆರಂಭವಾಯಿತು. ಕಾಮಾಕ್ಷಿ ದೇವಿಯನ್ನು ಕೊಂಡಾಡುವ ದೇವಿ ಮಾಹಾತ್ಮೆಯ ಮೂಲಕ ಶಕ್ತಿ ದೇವತೆಯನ್ನು ಸ್ತುತಿಸಿದರು.  

ಶಿವನು ಗಂಗಾ ದೇವಿಯನ್ನು ಜಟೆಯಲ್ಲಿ ಹಿಡಿದಿರುವ ಮೂಲಕ ಸ್ವರ್ಗ ಲೋಕದಿಂದ ಪಾತಾಳ ಲೋಕ, ಭೂಲೋಕ, ಎಲ್ಲಾ ಮೂರು ಲೋಕವನ್ನು ಹಿಡಿದಿಟ್ಟ ಪರಿಯನ್ನು ರೇವತಿ ರಾಗದ ಹಾಡಿಗೆ ಬಹಳ ಸುಂದರವಾಗಿ ನರ್ತಿಸಿದರು.

ಗಜಾ ಚರ್ಮಾಂಭರನಾಗಿರುವ ಮಹಾದೇವನ ಮಂಗಳಮಯ ಸ್ವರೂಪವನ್ನು ಹೊಗಳುವ ‘ದೇವ ನಾಮ ಚಂದ್ರಚೂಡ ಶಿವ ಶಂಕರ’ ಸ್ತುತಿಗೆ ಮನಸೊರೆಗೊಳ್ಳುವಂತೆ ನೃತ್ಯ ಮಾಡಿದರು.

ಶಿವ ನವರಸ ಲಾಸ್ಯ ನೃತ್ಯವನ್ನು ಮಾಡುವುದರ ಮೂಲಕ ಶಿವನ ಅವತಾರಗಳನ್ನು, ಮಹಿಮೆಯನ್ನು ನೃತ್ಯದ ಮೂಲಕ ಕೊಂಡಾಡುವ ಮೂಲಕ ಕಾರ್ಯಕ್ರಮ ಕೊನೆಗೊಂಡಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article