
ನ.30 ರಂದು ಶ್ರೀ ಕ್ಷೇತ್ರ ಕದ್ರಿಯಲ್ಲಿ ಲಕ್ಷದೀಪ: ಕಲ್ಕೂರ ಪ್ರತಿಷ್ಠಾನದಿಂದ ಭಜನಾ ಸಂಕೀರ್ತನೆ
ಮಂಗಳೂರು: ಶ್ರೀ ಕ್ಷೇತ್ರ ಕದ್ರಿಯಲ್ಲಿ ನ.30 ರಂದು ಲಕ್ಷದೀಪೋತ್ಸವ ಜರಗಲಿದ್ದು, ಇದೇ ಸಂದರ್ಭ ಕಲ್ಕೂರ ಪ್ರತಿಷ್ಠಾನವು ‘ಭಜನಾ ಸಂಕೀರ್ತನೆ’ ಕಾರ್ಯಕ್ರಮ ನಡೆಯಲಿದೆ.
ಸಂಜೆ 5 ಗಂಟೆಗೆ ಆರಂಭಗೊಳ್ಳಲಿರುವ ಈ ಕಾರ್ಯಕ್ರಮದಲ್ಲಿ ಕುಂಜಾರುಗಿರಿ ಗಿರಿಬಳಗ, ಮದ್ಧರಿ ನಾಮ ಸಂಕೀರ್ತನೋಪಾಸನಾ ಸಂಘ, ಬಾಳ-ಕಳವಾರು, ಶ್ರೀ ವಾದಿರಾಜ ತುಳಸಿ ಸಂಕೀರ್ತನಾ ಮಂಡಳಿ ಪಡುಬಿದ್ರಿ, ಶಿವಳ್ಳಿ ಸ್ಪಂದನ ಮಹಿಳಾ ಬಳಗ ಸುರತ್ಕಲ್ ವಲಯ, ಶಿವಳ್ಳಿ ಸ್ಪಂದನ ಕದ್ರಿ, ಅಲೆವೂರು ವಿಷ್ಣುಮೂರ್ತಿ ಬಳಗ ಉಡುಪಿ, ಶಿವಳ್ಳಿ ಸ್ಪಂದನ ಎಕ್ಕೂರು ವಲಯ, ಶಿವಳ್ಳಿ ಸ್ಪಂದನ ಮಹಿಳಾ ಘಟಕ ಕದ್ರಿ ಮತ್ತಿತರ ಭಜನಾ ತಂಡಗಳು ಭಜನಾ ಸಂಕೀರ್ತನೆ ನಡೆಸಲಿವೆ. ಕಾರ್ಯಕ್ರಮವನ್ನು ಎ.ಜೆ. ಶೆಟ್ಟಿ ಅವರು ಗಣ್ಯರ ಉಪಸ್ಥಿತಿಯಲ್ಲಿ ದೀಪ ಬೆಳಗಿಸಿ ಉದ್ಘಾಟಿಸಲಿದ್ದಾರೆ.
ಶ್ರೀ ಕ್ಷೇತ್ರದಲ್ಲಿ ರಾತ್ರಿ 08.30ಕ್ಕೆ ‘ತುಳಸೀ ಪೂಜೆ’ ಹಾಗೂ ರಾತ್ರಿ 9 ಗಂಟೆಗೆ ‘ಮಹಾಪೂಜೆ’ ಜರಗಲಿದ್ದು, ಬಳಿಕ ದೇವರ ‘ಉತ್ಸವ ಸವಾರಿ’, ‘ಗುರ್ಜಿ ದೀಪೋತ್ಸವ’, ‘ಬಲಿ ಉತ್ಸವ’ದ ಬಳಿಕ ‘ರಥೋತ್ಸವ’ವು ವೆ.ಮೂ. ವಿಠ್ಠಲದಾಸ ತಂತ್ರಿಯವರ ಮಾರ್ಗದರ್ಶನ ಹಾಗೂ ಪ್ರಧಾನ ಅರ್ಚಕರುಗಳಾದ ವೆ.ಮೂ. ವಾಸುದೇವ ಭಟ್, ವೆ.ಮೂ. ರಾಘವೇಂದ್ರ ಅಡಿಗ, ವೆ.ಮೂ. ಡಾ. ಪ್ರಭಾಕರ ಅಡಿಗ, ವೆ.ಮೂ. ರಾಘವೇಂದ್ರ ಭಟ್ ಇವರೆಲ್ಲರ ಉಪಸ್ಥಿತಿಯಲ್ಲಿ ನಡೆಯಲಿರುವುದು.
ಕದ್ರಿ ಜೋಗಿ ಮಠದ ಮಠಾಧೀಶರಾದ ಶ್ರೀ ನಿರ್ಮಲನಾಥಜೀ ದಿವ್ಯ ಸಾನಿಧ್ಯ ವಹಿಸಲಿದ್ದು, ಕ್ಷೇತ್ರದ ಆಡಳಿತಾಧಿಕಾರಿ ಗೋವಿಂದ ನಾಯ್ಕ್ ಹಾಗೂ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಉಪಸ್ಥಿತರಿರುವರೆಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.