ಲಕ್ಷದೀಪೋತ್ಸವದಲ್ಲಿ ‘ಮಹಾನ್ ಬುದ್ಧ’ ನೃತ್ಯನಾಟಕ
Saturday, November 30, 2024
ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವದ ಪ್ರಯುಕ್ತ ಮಂಗಳವಾರ ವಸ್ತು ಪ್ರದರ್ಶನ ಮಂಟಪದಲ್ಲಿ ‘ಮಹಾನ್ ಬುದ್ಧ’ ಡ್ಯಾನ್ಸ್ ಡ್ರಾಮಾ ಕಾರ್ಯಕ್ರಮ ಜರುಗಿತು. ಬೆಂಗಳೂರಿನ ‘ಸೃಷ್ಟಿ ಅಭಿನಯ ಕಲಾವಿದರ ಕೇಂದ’ದ ಕಲಾವಿದರು ಭಗವಾನ್ ಬುದ್ಧನ ಜೀವನ ಚರಿತ್ರೆಯ ರೂಪಕವನ್ನು ಪ್ರಸ್ತುತ ಪಡಿಸಿದರು.
ಎವಿ ಸತ್ಯನಾರಾಯಣ ನಿರ್ದೇಶನದಲ್ಲಿ ಮೂಡಿಬಂದ ‘ಮಹಾನ್ ಬುದ’ ಡ್ಯಾನ್ಸ್ ಡ್ರಾಮಾ ರಾಜಕುಮಾರ ಸಿದ್ಧಾರ್ಥ ಗೌತಮಬುದ್ಧನಾಗಿ ಪರಿವರ್ತನೆಯಾಗುವ ಪ್ರಸಂಗವನ್ನು ಒಳಗೊಂಡಿತ್ತು. ಗೌತಮಬುದ್ಧ ಜೀವನಾಧಾರಿತ ಈ ನೃತ್ಯ ನಾಟಕ ನೋಡುಗರನ್ನು ಮನಸೂರೆಗೊಳಿಸಿತು.
ಲುಂಬಿನಿಯಲ್ಲಿ ಜನಿಸಿದ ಸಿದ್ಧಾರ್ಥ ಅರಮನೆಯ ರಾಜವೈಭೋಗ ಹಾಗೂ ರಾಜಪಟ್ಟ ಹೀಗೆ ಲೌಕಿಕ ಆಡಂಬರವನ್ನು ತೊರೆದು ಜ್ಞಾನದೆಡೆಗೆ ಸಾಗುವ ಪಯಣವನ್ನು ಅತ್ಯಂತ ಮನೋಹರವಾಗಿ ಪ್ರಸ್ತುತ ಪಡಿಸಿದರು. ರಾಗ, ತಾಳ, ಭಾವ, ನಿರೂಪಣೆ, ನೃತ್ಯ, ಕಲಾವಿದರ ನಟನೆ ಈ ನೃತ್ಯನಾಟಕದ ಮೆರುಗು ಹೆಚ್ಚಿಸಿತು.