ಗ್ರಾಮ ಪಂಚಾಯತ್ ಉಪ ಚುನಾವಣೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಸಾಧನೆ: ಬಿಜೆಪಿಗೆ ಹಿನ್ನಡೆಯಾಗಿದೆ ಶುಭದರಾವ್

ಗ್ರಾಮ ಪಂಚಾಯತ್ ಉಪ ಚುನಾವಣೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಸಾಧನೆ: ಬಿಜೆಪಿಗೆ ಹಿನ್ನಡೆಯಾಗಿದೆ ಶುಭದರಾವ್

ಕಾರ್ಕಳ: ಗ್ರಾಮ ಪಂಚಾಯತ್ ಉಪ ಚುನಾವಣೆಯಲ್ಲಿ ಕಳೆದ ಬಾರಿಕ್ಕಿಂತ ಹೆಚ್ಚು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಿದ ಮತದಾರರಿಗೆ ಮತ್ತು ಕಾರ್ಯಕರ್ತರಿಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದರಾವ್ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.

ಕಾರ್ಕಳ ವಿಧಾನ ಸಭಾ ಕ್ಷೇತದ ವಿವಿಧ ಗ್ರಾಮ ಪಂಚಾಯಿತಿಯ ಎಂಟು ಸ್ಥಾನಗಳಿಗೆ ನಡೆದ ಉಪ ಚುನಾವಣೆಯಲ್ಲಿ ಏಳು ಕಡೆಗಳಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಅವರಲ್ಲಿ ಒಂದು ಅಭ್ಯರ್ಥಿಯು ಅವಿರೋಧ ಆಯ್ಕೆಯಾಗಿದ್ದಾರೆ. ಉಳಿದ ಆರು ಸ್ಥಾನದ ಸ್ಪರ್ಧೆಯಲ್ಲಿ ಎರಡು ಸ್ಥಾನವನ್ನು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಗೆದ್ದು ಕಳೆದ ಬಾರಿಕ್ಕಿಂತ ಹೆಚ್ಚು ಎರಡು ಸ್ಥಾನವನ್ನು ಪಡೆದಿದ್ದಾರೆ, ಈದು ಗ್ರಾಮದಲ್ಲಿ ಕಾಂಗ್ರೆಸ್ ಒಂದು ಸ್ಥಾನವನ್ನು ಕಳೆದುಕೊಂಡರೂ ನಲ್ಲೂರು, ನೀರೆ ಮತ್ತು ಕಡ್ತಲದಲ್ಲಿ ಮೂರು ಹೆಚ್ಚುವರಿ ಸ್ಥಾನವನ್ನು ಪಡೆದುಕೊಂಡಿದ್ದೇವೆ. ಬಿಜೆಪಿ ಬೆಂಬಲಿತರು ಸ್ಪರ್ಧಿಸಿದ್ದ ಏಳು ಸ್ಥಾನಗಳಲ್ಲಿ ಮೂರನ್ನು ಗೆದಿದ್ದು ಎರಡು ಸ್ಥಾನವನ್ನು ಬಿಜೆಪಿಯ ಬಂಡಾಯ ಪಕ್ಷೇತರ ಅಭ್ಯರ್ಥಿಗಳು ಜಯಗಳಿಸಿದ್ದಾರೆ, ಇದು ಕಾಂಗ್ರೆಸ್ ಸಾಧನೆಗೆ ಮತ್ತು ಬಿಜೆಪಿ ಹಿನ್ನಡೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ತಿಳಿಸಿದ್ದಾರೆ.

ರಾಜ್ಯ ಸರಕಾರದ ಜನಪರ ಕಾರ್ಯಗಳು ಜನರಿಗೆ ತಲುಪಿ ಅವರ ಬದುಕಿಗೆ ಸಹಕಾರಿಯಾಗಿದೆ ಇದರಿಂದ ನಾವು ಮತದಾರ ವಿಶ್ವಾಸವನ್ನು ಗಳಿಸುವಲ್ಲಿ ಯಶಸ್ವಿಯಾಗಿ ಹೆಚ್ಚುವರಿ ಸ್ಥಾನವನ್ನು ಗೆಲ್ಲಲು ಸಹಕಾರಿಯಾಗಿದೆ. ಕಳೆದ ಚುನಾವಣೆಯಲ್ಲಿ ಎಂಟರಲ್ಲಿ ಒಂದು ಸ್ಥಾನದಲ್ಲಿ ಗೆದ್ದಿದ್ದ ನಾವು ಈ ಬಾರಿ ಮೂರು ಸ್ಥಾನ ಗೆದ್ದು ಸಾಧಿಸಿದ್ದೇವೆ, ಕಳೆದ ಬಾರಿ ಏಳು ಸ್ಥಾನದಲ್ಲಿ ಗೆದ್ದಿದ್ದ ಬಿಜೆಪಿ ಈ ಬಾರಿ ಮೂರು ಸ್ಥಾನಕ್ಕೆ ಕುಸಿದು ಹಿನ್ನಡೆ ಅನುಭವಿಸಿದೆ ಎಂದು ಶುಭದರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article