ತಮ್ಮನನ್ನು ಇರಿದು ಕೊಂದ ಅಣ್ಣ

ತಮ್ಮನನ್ನು ಇರಿದು ಕೊಂದ ಅಣ್ಣ

ಕಾಸರಗೋಡು: ತಮ್ಮನನ್ನು ಅಣ್ಣನೇ ಮಾರಕಾಯುಧದಿಂದ ಇರಿದು ಕೊಲೆಗೈದ ಘಟನೆ ಸೋಮವಾರ ರಾತ್ರಿ ಚೆಮ್ನಾಡ್‌ನಲ್ಲಿ ನಡೆದಿದೆ. ಈ ತಡೆಯಲೆತ್ನಿಸಿದ ಇಬ್ಬರು ಸಂಬಂಧಿಕರು ಕೂಡಾ ಗಾಯಗೊಂಡಿದ್ದಾರೆ.

ಚೆಮ್ನಾಡ್ ಪೇರವಲಪ್ಪು ನಿವಾಸಿ ಎ.ಚಂದ್ರನ್ ನಾಯರ್ (30) ಕೊಲೆಯಾದವರು. ಮೃತರ ಸಹೋದರ ಎ.ಗಂಗಾಧರನ್ (೪೭) ಕೊಲೆ ಆರೋಪಿಯಾಗಿದ್ದು, ಆತನನ್ನು ಮೇಲ್ಪರಂಬ ಠಾಣಾ ಪೊಲೀಸರು ಬಂಧಿಸಿದ್ದಾರೆ.  ಆಸ್ತಿ ವಿಚಾರದ ವೈಮನಸ್ಸು ಕೃತ್ಯಕ್ಕೆ ಕಾರಣ ಎನ್ನಲಾಗಿದೆ. 

ಆಸ್ತಿ ವಿವಾದಕ್ಕೆ ಸಂಬಂಧಿಸಿ ಚಂದ್ರನ್ ಮತ್ತು ಗಂಗಾಧರನ ನಡುವೆ ಕಳೆದ ರಾತ್ರಿ ಎಂಟು ಗಂಟೆ ಸುಮಾರಿಗೆ ತೀವ್ರ ವಾಗ್ವಾದ ನಡೆದಿದ್ದು, ಇದು ಜಗಳಕ್ಕೆ ತಿರುಗಿದು. ಈ ವೇಳೆ ಗಂಗಾಧರ ಮಾರಕಾಯುಧದಿಂದ ಚಂದ್ರನ್ ಮೇಲೆ ದಾಳಿ ನಡೆಸಿದ್ದಾನೆ ಎನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಚಂದ್ರನ್ ಸಾವನ್ನಪ್ಪಿದ್ದಾರೆ. 

ಅಣ್ಣ-ತಮ್ಮಂದಿರ ಜಗಳ ಬಿಡಿಸಲೆತ್ನಿಸಿದ ಸಂಬಂಧಿಕಾರದ ಪೇರವಲಪ್ಪಿನ ಎ.ಮಣಿಕಂಠ(46) ಮತ್ತು ಗೋಪಿನಾಥ್(44) ಎಂಬವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 

ಆರೋಪಿಯನ್ನು ಬಂಧಿಸಿರುವ ಮೇಲ್ಪರಂಬ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article