ಬಾಲಕಿಯರ ಹಾಸ್ಟೆಲ್‌ಗೆ ನುಗ್ಗಿದ ಅಪರಿಚಿತ ವ್ಯಕ್ತಿ

ಬಾಲಕಿಯರ ಹಾಸ್ಟೆಲ್‌ಗೆ ನುಗ್ಗಿದ ಅಪರಿಚಿತ ವ್ಯಕ್ತಿ

ಪುತ್ತೂರು: ಪಡೀಲ್ ಹಾರಾಡಿ ಎಂಬಲ್ಲಿರುವ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಅಪರಿಚಿತ ಯುವಕನೊಬ್ಬ ನ. 6ರಂದು ಮಧ್ಯರಾತ್ರಿ ನುಗ್ಗಿದ್ದು, ಈ ದೃಶ್ಯವು ಇಲ್ಲಿರುವ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ. 

ಮಂಗಳವಾರ ಪುತ್ತೂರು ಮಹಿಳಾ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

ನ.೬ರಂದು ಮಧ್ಯರಾತ್ರಿ ಸುಮಾರು 2.30 ರಿಂದ 3.30 ತನಕ ಹಾಸ್ಟೆಲ್ ಒಳಗೆ ಉಳಿದುಕೊಂಡಿದ್ದ ಈತನ ಚಲನವಲನವನ್ನು ಬಾಲಕಿಯೊಬ್ಬಳು ವಿಡಿಯೋ ಮಾಡಿದ್ದಾಳೆ. ಬಳಿಕ ಹಾಸ್ಟ್‌ಲ್‌ನ  ಮೇಲ್ವಿಚಾರಕರಿಗೆ ಮಾಹಿತಿ ನೀಡಿದ್ದಾಳೆ ಎಂದು ತಿಳಿದು ಬಂದಿದೆ. ಇನ್ನೊಂದೆಡೆ ಈ ದೃಶ್ಯ ಹಾಸ್ಟೆಲ್ನಲ್ಲಿ ಇರುವ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ.

ಈ ಬಗ್ಗೆ ವಿದ್ಯಾರ್ಥಿ ನಿಯಲದ ಮೇಲ್ವಿಚಾರಕರು ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನ.೧೦ರಂದು ದೂರು ಪಡೆದು ಕೊಂಡಿರುವ ಪೊಲೀಸರು ಇದೀಗ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article