
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಪ್ರತಿಯೊಬ್ಬ ಹಿಂದೂ ಇಂದಿನಿಂದ ಸಂಕಲ್ಪ ಮಾಡಬೇಕಿದೆ: ಪ್ರಣವ ಮಲ್ಯ
ಮಂಗಳೂರು: ಬಹುಸಂಖ್ಯಾತ ಇರುವ ಹಿಂದೂಗಳು ಶಿವಾಜಿಯವರನ್ನು ಆದರ್ಶ ಇಟ್ಟುಕೊಂಡು ಪ್ರತಿದಿನ ಒಂದು ಗಂಟೆಯಾದರೂ ರಾಷ್ಟ್ರ ಮತ್ತು ಧರ್ಮಕ್ಕಾಗಿ ತನು, ಮನ, ಧನದ ತ್ಯಾಗ ಮಾಡಬೇಕೆಂದು ಹಿಂದೂ ಜನಜಾಗೃತಿ ಸಮಿತಿಯ ಡಾ. ಪ್ರಣವ್ ಮಲ್ಯ ಇವರು ಕರೆ ನೀಡಿದರು.
ಅವರು ನ.24 ರಂದು ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸಭಾಗೃಹ, ಕಾವು, ಬಜಾಲ್, ಮಂಗಳೂರಿನಲ್ಲಿ ಹಿಂದೂ ರಾಷ್ಟ್ರ-ಜಾಗೃತಿ ಸಭೆಯನ್ನು ಭಾಗವಹಿಸಿ ಮಾತನಾಡಿದರು.
ದೇಶವನ್ನು ಆಳಿದ ಮುಘಲರು, ಬ್ರಿಟಿಷರು, ಪೋರ್ಚುಗೀಸರು, ಪ್ರತಿಯೊಬ್ಬರೂ ಧರ್ಮವನ್ನು ಗುರಿಯಾಗಿಸಿ ಹಿಂದೂ ಧರ್ಮವನ್ನು ನಾಶ ಮಾಡಲು ಪ್ರಯತ್ನಿಸಿದರು. ಸದ್ಯದ ಸ್ಥಿತಿಯಲ್ಲಿಯೂ ಕೂಡ ಹಿಂದೂ ಧರ್ಮದ ಮೇಲೆ ನಿರಂತರ ಆಘಾತ ನಡೆಯುತ್ತಿದೆ. ವಕ್ಫ್ ಕಾಯ್ದೆ, ಲವ್ ಜಿಹಾದ್ ನಂತಹ ಸಮಸ್ಯೆ ಹಿಂದೂಗಳು ಎದುರಿಸಬೇಕಾಗಿದೆ. ಧರ್ಮ ಉಳಿದರೆ ರಾಷ್ಟ್ರ ಉಳಿಯುವುದು, ರಾಷ್ಟ್ರ ಉಳಿದರೆ ನಾವು ಬದುಕಿರಲು ಸಾಧ್ಯ ಇದನ್ನು ಅರಿತುಕೊಳ್ಳುವ ಅವಶ್ಯಕತೆ ಇದೆ. ಹಿಂದೂ ರಾಷ್ಟ್ರ ಸಧ್ಯದ ಕಾಲದ ಅವಶ್ಯಕತೆಯಾಗಿದೆ. ಹಿಂದೂ ರಾಷ್ಟ್ರ ನಮಗೆ ಯಾರೂ ಉಡುಗೊರೆಯಾಗಿ ಕೊಡುವುದಿಲ್ಲ. ಇದಕ್ಕಾಗಿ ಸಂಘರ್ಷ ಮಾಡಬೇಕಾಗುತ್ತದೆ. ಛತ್ರಪತಿ ಶಿವಾಜಿ ಮಹಾರಾಜರು ಸರ್ವಸ್ವವನ್ನು ತ್ಯಾಗ ಮಾಡಿ ಹಿಂದವೀ ಸ್ವರಾಜ್ಯವನ್ನು ಸ್ಥಾಪಿಸಿದರು ಎಂದು ತಿಳಿಸಿದರು.
ಸನಾತನ ಧರ್ಮ ಅನಾದಿಕಾಲದಿಂದ ಇದೆ. ವೇದಕಾಲದಿಂದ ಜಾತಿಯ ವರ್ಣನೆ ಇಲ್ಲ, ಹಿಂದೂ ಧರ್ಮದಲ್ಲಿ ಯಾವುದೇ ಜಾತಿಯವರಿದ್ದರೂ ಅವರು ಸನಾತನಿಯರು. ಜಾತಿಯ ಹೆಸರಿನಲ್ಲಿ ಬೇರೆ ಆಗುವ ಬದಲು ಹಿಂದೂ ಧರ್ಮದ ಅಡಿಯಲ್ಲಿ ಸಂಘಟಿರಾಗಿ ಧರ್ಮಾಚರಣೆಯನ್ನು ಮಾಡಬೇಕು ಮತ್ತು ಧರ್ಮದ ಇತಿಹಾಸ, ಮಹತ್ವವನ್ನು ತಿಳಿದುಕೊಳ್ಳಬೇಕು. ಹಿಂದೂ ರಾಷ್ಟ್ರ ಸಾಕಾರಗೊಳಿಸಲು ಹಿಂದೂ ಬಾಂಧವರಿಗೆ ಸಂಘಟಿತರಾಗಲು ಆಧ್ಯಾತ್ಮಿಕ ಪ್ರಚನಕಾರ ಉಡುಪಿಯ ನಟರಾಜ ಭಟ್ ಹೇಳಿದರು.
ಸನಾತನ ಸಂಸ್ಥೆಯ ವಕ್ತಾರೆ ಲಕ್ಷ್ಮಿ ಪೈ ಮಾತನಾಡಿ, ತಮ್ಮ ಪ್ರವಚನದಲ್ಲಿ ಸನಾತನ ಧರ್ಮದ ವೈಜ್ಞಾನಿಕತೆಯ ಬಗ್ಗೆ ಹಾಗೂ ಶ್ರೇಷ್ಠತ್ವದ ಬಗ್ಗೆ ವಿವರಿಸಿದರು. ಹಿಂದೂ ಧರ್ಮದಲ್ಲಿ ಹೇಳಲಾದ ಪ್ರತಿಯೊಂದು ಆಚರಣೆಗಳ ಹಿಂದೆ ವಿಜ್ಞಾನವಿದೆ, ಅಧ್ಯಾತ್ಮವಿದೆ ಮತ್ತು ಈಶ್ವರನ ಅಧಿಷ್ಠಾನವಿದೆ, ಎಲ್ಲರಿಗೂ ಮಂಗಳವಾಗಲಿ ಎಂಬ ಆಶಯ ಇದೆ. ವರ್ತಮಾನ ಕಾಲದಲ್ಲಿ ಹಿಂದೂಗಳು ಧರ್ಮದಿಂದ ದೂರ ಹೋಗಿರುವುದರಿಂದಲೇ ಅನೇಕ ಸಂಕಟಗಳನ್ನು ಮತ್ತು ಆಘಾತಗಳನ್ನು ಎದುರಿಸಬೇಕಾಗಿದೆ. ಮುಂಬರುವ ಭೀಕರ ಆಪತ್ಕಾಲವನ್ನು ಎದುರಿಸಲು ಪ್ರತಿಯೊಬ್ಬರೂ ಆಧ್ಯಾತ್ಮಿಕ ಸಾಧನೆಯನ್ನು ಮಾಡಿ ಆಧ್ಯಾತ್ಮಿಕ ಬಲವನ್ನು ಹೆಚ್ಚಿಸುವುದರ ಅವಶ್ಯಕತೆ ಇದೆ. ನಾವೆಲ್ಲರೂ ಈ ಕ್ಷಣದಿಂದ ಧರ್ಮಪಾಲನೆಯನ್ನು ಮಾಡಿ ಸಾಧನೆಯನ್ನು ಪ್ರಾರಂಭಿಸಿ ಸನಾತನ ಧರ್ಮರಕ್ಷಣೆಯ ದಿವ್ಯ ಸಂಕಲ್ಪ ಮಾಡೋಣ ಎಂದು ಕರೆ ನೀಡಿದರು.
250ಕ್ಕೂ ಹೆಚ್ಚು ಹಿಂದೂ ಬಾಂಧವರು ಈ ಸಭೆಯಲ್ಲಿ ಉಪಸ್ಥಿತರಿದ್ದರು. ಹಿಂದೂ ಯುವ ಸೇನೆ ಮತ್ತು ಹಿಂದೂ ಸೇವಾ ಸಮಿತಿಯ ಕಾರ್ಯಕರ್ತರು, ಕಾವು ಪಂಚಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ರಾಮಚಂದ್ರ ಆಳ್ವಾ, ಮಾಜಿ ಅಧ್ಯಕ್ಷ ಕಿರಣ್ ರೈ, ಸೂರ್ಯ ನಾರಾಯಣ ದೇವಸ್ಥಾನದ ಅಧ್ಯಕ್ಷ ಗಣೇಶ ಶೆಟ್ಟಿ, ಮಂಗಳೂರು ಮಹಾನಗರ ಪಾಲಿಕೆ ಸದಸ್ಯರಾದ ಶೋಭಾ ಪೂಜಾರಿ ಮತ್ತು ವೀಣಾ ಮಂಗಲ ಉಪಸ್ಥಿತರಿದ್ದರು.