ಎಸ್.ಜೆ.ಇ.ಸಿ. ಮಹಿಳಾ ವಾಲಿಬಾಲ್ ತಂಡಕ್ಕೆ ರನ್ನರ್ಸ್ ಅಪ್ ಟ್ರೋಫಿ
Sunday, November 17, 2024
ಮಂಗಳೂರು: ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜು (ಎಸ್.ಜೆ.ಇ.ಸಿ) ಮಹಿಳಾ ವಾಲಿಬಾಲ್ ತಂಡವು ನ.12 ಮತ್ತು 13 ರಂದು ಎಜಿಎಂಆರ್ಸಿಇ ವರೂರು ಹುಬ್ಬಳ್ಳಿಯಲ್ಲಿ ನಡೆದ ವಿಟಿಯು ರಾಜ್ಯ ಮಟ್ಟದ ಮಹಿಳಾ ವಾಲಿಬಾಲ್ ಪಂದ್ಯಾವಳಿಯಲ್ಲಿ ರನ್ನರ್ಸ್ ಅಪ್ ಟ್ರೋಫಿಯನ್ನು ಪಡೆದುಕೊಂಡಿದೆ.
ದೈಹಿಕ ಶಿಕ್ಷಣ ನಿರ್ದೇಶಕಿ (ಪಿಇಡಿ) ವನೀಷಾ ವಿ. ರೋಡ್ರಿಗಸ್ ಮತ್ತು ಎಸ್.ಜೆ.ಇ.ಸಿ. ವಾಲಿಬಾಲ್ ತರಬೇತುದಾರ ಜಮುನಾ ಅವರ ಮಾರ್ಗದರ್ಶನದಲ್ಲಿ ಪಡೆದ ಈ ಅಗಾಧ ಸಾಧನೆಗಾಗಿ ಇಡೀ ತಂಡ ಮತ್ತು ದೈಹಿಕ ಶಿಕ್ಷಣ ನಿರ್ದೇಶಕರನ್ನು ಎಸ್.ಜೆ.ಇ.ಸಿ.ಯ ಆಡಳಿತ ಮಂಡಳಿಯು ಅಭಿನಂದಿಸಿದೆ.