
ಲೆನಿಶಾ ಮಲೈಕಾ ಮೊರಾಸ್ ಅದ್ವಿತೀಯ ಸಾಧನೆ
Wednesday, November 13, 2024
ಮಂಗಳೂರು: ಎಸಿಸಿಎ ಗ್ಲೋಬಲ್ ಸೆಪ್ಟೆಂಬರ್ 2024ರಲ್ಲಿ ನಡೆಸಿದ ಸ್ಟ್ರಾಟೆಜಿಕ್ ಬಿಸಿನೆಸ್ ರಿಪೋಟಿಂಗ್ ಪರೀಕ್ಷೆಯಲ್ಲಿ ಅಖಿಲ ಭಾರತ 2ನೇ ರ‍್ಯಾಂಕ್ ಮತ್ತು ವಿಶ್ವಾದ್ಯಂತ 5ನೇ ರ‍್ಯಾಂಕ್ ಪಡೆಯುವ ಮೂಲಕ ಪ್ರತಿಭಾವಂತ ಲೆನಿಶಾ ಮಲೈಕಾ ಮೊರಾಸ್ ಅದ್ವಿತೀಯ ಸಾಧನೆ ಮಾಡಿದ್ದಾರೆ.
ಮಂಗಳೂರಿನ ನಂತೂರಿನಲ್ಲಿ ನೆಲೆಸಿರುವ ಲ್ಯಾನ್ಸಿ ಪಿ.ಎಂ. ಮೊರಾಸ್ ಮತ್ತು ಸಿಂಥಿಯಾ ಮರಿಯಾ ಮೊರಾಸ್ ಅವರ ಪುತ್ರಿ ಲೆನಿಶಾ ಅವರು 2021-2024 ರವರೆಗೆ ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜಿನಲ್ಲಿ (ಸ್ವಾಯತ್ತ) ಎಸಿಸಿಎ ಪದವಿಯೊಂದಿಗೆ ಬಿಕಾಂ ಅನ್ನು ಪೂರ್ಣಗೊಳಿಸಿದ್ದಾರೆ. ಎಸಿಸಿಎ ಜಾಗತಿಕ ಪರೀಕ್ಷೆಯಲ್ಲಿ ಸ್ಕೋರ್ 94 ಅಂಕಗಳು ಹಣಕಾಸು ಮತ್ತು ಲೆಕ್ಕಪತ್ರದಲ್ಲಿ ಗಳಿಸಿರುತ್ತಾರೆ.