ಇ ಖಾತಾ ತಿದ್ದುಪಡಿ ಅದಾಲತ್

ಇ ಖಾತಾ ತಿದ್ದುಪಡಿ ಅದಾಲತ್

ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯ ಆಸ್ತಿಗಳಿಗೆ ಇ-ಆಸ್ತಿ ತಂತ್ರಾಂಶದ ಮೂಲ ಇ ಖಾತಾಗಳನ್ನು ವಿತರಿಸಲಾಗುತ್ತಿದ್ದು, ಅದರಲ್ಲಿ ಯಾವುದೇ ತಿದ್ದುಪಡಿಗಳು ಅಗತ್ಯವಿದ್ದಲ್ಲಿ ಡಿ. 16ರಿಂದ 18ರವರೆಗೆ ಮೂರು ವಲಯ ಕಚೇರಿಗಳಲ್ಲಿ ತಿದ್ದುಪಡಿ ಅದಾಲತ್ ನಡೆಸಲಾಗುವುದು ಎಂದು ಪಾಲಿಕೆಯ ಉಪ ಆಯುಕ್ತರ ಪ್ರಕಟಣೆ ತಿಳಿಸಿದೆ.

ಕಾವೇರಿ-2 ತಂತ್ರಾಂಶದೊಂದಿಗೆ ಇ ಆಸ್ತಿ ತಂತ್ರಾಂಶ ಸಂಯೋಜನೆ ಮಾಡಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆಯುತ್ತಿದ್ದು, ನೀಡಲಾಗಿರುವ ಇ ಖಾತೆಗಳಲ್ಲಿ ತಿದ್ದುಪಡಿ ಅಗತ್ಯವಿದ್ದಲ್ಲಿ ಡಿ. 16ರಂದು ಸುರತ್ಕಲ್ ವಲಯ ಕಚೇರಿ, ಲಾಲ್‌ಬಾಗ್ ಕೇಂದ್ರ ಕಚೇರಿಯಲ್ಲಿ ಡಿ.17 ಹಾಗೂ ಕದ್ರಿ ವಲಯ ಕಚೇರಿಲ್ಲಿ ಡಿ. 18ರಂದು ಬೆಳಗ್ಗೆ 10ರಿಂದ 5.30ರವರೆಗೆ ಅದಾಲತ್ ನಡೆಯಲಿದೆ. 

ಕಟ್ಟಡ ನಂಬ್ರ ತಿದ್ದುಪಡಿ- ನೋಂದಾಯಿತ ದಸ್ತಾವೇಜು, ಕಟ್ಟಡ ತೆರಿಗೆ ಪಾವತಿ ರಶೀದಿ ಪ್ರತಿ, ಹೆಸರು ತಿದ್ದುಪಡಿ- ನೋಂದಾಯಿತ ದುರಸ್ತಿ ಪತ್ರ ದಸ್ತಾವೇಜು, ಕ್ರಯಸಾಧನ, ನೋಂದಾಯಿತ ವೀಲುನಾಮೆ, ದಾನಪತ್ರ, ವಿಸ್ತೀರ್ಣ ತಿದ್ದುಪಡಿ- ನೋಂದಾಯಿತ ದಸ್ತವೇಜು, ವಿನ್ಯಾಸ ಅನುಮೋದನೆ, ಚಕ್ಕುಬಂದಿ-ನೋಂದಾಯಿತ ದಸ್ತವೇಜು, ವಿನ್ಯಾಸ ಅನುಮೋದನೆಯೊಂದಿಗೆ ತಿದ್ದುಪಡಿ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article