
ರಾಷ್ಟ್ರೀಯ ಹೆದ್ದಾರಿ ಅಹವಾಲು ಹೇಳಿಕೊಳ್ಳಲು ಅವಕಾಶ
ಮಂಗಳೂರು: ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಆದಷ್ಟೂ ಪರಿಹರಿಸಲಾಗುತ್ತಿದೆ. ಸಮಸ್ಯೆ ಕುರಿತು ನಾಗರಿಕ ಗುಂಪು, ಸಂಘಟನೆಗಳಿಗೆ ಯಾವುದೇ ಅಹವಾಲುಗಳಿದ್ದರೆ ಅದನ್ನು ಹೇಳಿಕೊಳ್ಳಲು ಅವಕಾಶ ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.
ತಮ್ಮ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಹೆದ್ದಾರಿ ನಿರ್ಮಾಣ, ನಿರ್ವಹಣೆ ವಿಷಯದಲ್ಲಿ ಸಮಸ್ಯೆ ಇರುವುದು ನಿಜ. ಅಹವಾಲುಗಳಿಗೆ ಮುಕ್ತ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ವಾಟ್ಸಾಪ್ ಗ್ರೂಪ್ ರಚಿಸಲಾಗುವುದು ಎಂದರು.
ನಂತೂರು, ಕೆಪಿಟಿ ಭಾಗದಲ್ಲಿ ಕೆಲಸ ನಡೆಯುತ್ತಿದೆ. ಕೂಳೂರಿನಲ್ಲಿ ಷಟ್ಫಥ ಸೇತುವೆ ನಿರ್ಮಾಣದಲ್ಲಿ ಗುತ್ತಿಗೆದಾರರಿಂದ ಸಾಕಷ್ಟು ವಿಳಂಬವಾಗಿದೆ. ಈಗ ಕೆಲಸ ಆರಂಭಿಸಿದ್ದರೂ ನಿಧಾನಗತಿಯಲ್ಲಿದೆ. ನಿರಂತರವಾಗಿ ಹೆದ್ದಾರಿ ಪ್ರಾಧಿ ಕಾರಕ್ಕೆ ಸೂಚನೆ ನೀಡಲಾಗುತ್ತಿದೆ. ಕಲ್ಲಡ್ಕದ ಫ್ಲೈ ಓವರ್ ನಿರ್ಮಾಣ ವಿಳಂಬವಾಗಿದೆ. ಸಮಸ್ಯೆ ಆದಷ್ಟೂ ಪರಿಹರಿಸಲಾಗುತ್ತಿದೆ ಎಂದರು.
ಶೀಘ್ರ ವರದಿ..
ಪಿಲಿಕುಳದಲ್ಲಿ ಕಂಬಳ್ಳೋತ್ಸವ ನಡೆಸುವ ಕುರಿತು ಹೈಕೋರ್ಟ್ ನಲ್ಲಿ ತಡೆಯಾಜ್ಞೆ ಕೋರಿ ಅರ್ಜಿ ಹಾಕಿರುವ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಕಂಬಳದಿಂದ ಪಿಲಿಕುಳದ ಮೃಗಾಲಯಕ್ಕೆ ಶಬ್ದಮಾಲಿನ್ಯ ಆಗುತ್ತದೆಯೇ ಎನ್ನುವುದಕ್ಕೆ ಸಂಬಂಧಿಸಿ ಮೈಸೂರು ಮೃಗಾಲಯದ ಹಿರಿಯ ಅಧಿಕಾರಿ, ಜಿಲ್ಲಾ ಪಶು ಸಂಗೋಪನೆ ಇಲಾಖೆ ಉಪ ನಿರ್ದೇಶಕರನ್ನೊಳಗೊಂಡ ಅಧಿಕಾರಿಗಳು ಮತ್ತು ತಜ್ಞರ ಸಮಿತಿ
ರಚಿಸಲಾಗಿದ್ದು, ವರದಿ ನೀಡಲು ತಿಳಿಸಲಾಗಿದೆ. ಈ ವರದಿಯನ್ನು ಹೈಕೋರ್ಟ್ಗೆ ಸಲ್ಲಿಸಲಾಗುವುದು. ಈ ಕುರಿತಂತೆ ಮುಂದಿನ ದಿನಗಳಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.