
ಅ.ಭಾ.ವಿ.ಪ. ಗೂಂಡಾಗಿರಿ: ಸುಹಾನ್ ಆಳ್ವ ಆರೋಪ
Friday, November 15, 2024
ಮಂಗಳೂರು: ರಾಜಕೀಯ ದುರುದ್ದೇಶದಿಂದ ಎಬಿವಿಪಿ ಮಂಗಳೂರು ವಿಶ್ವವಿದ್ಯಾನಿಲಯದ ಆಡಳಿತ ಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿ ಗೂಂಡಾಗಿರಿ ನಡೆಸಿದೆ ಎಂದು ದ.ಕ.ಜಿಲ್ಲಾ ಎನ್.ಎಸ್.ಯು.ಐ ಅಧ್ಯಕ್ಷ ಸುಹಾನ್ ಆಳ್ವ ಆರೋಪಿಸಿದ್ದಾರೆ.
‘ಅಂಕಪಟ್ಟಿ ವಿಷಯಕ್ಕೆ ಸಂಬಂಧಿಸಿದಂತೆ ಎನ್.ಎಸ್.ಯು.ಐ ಜಿಲ್ಲಾ ಮತ್ತು ಉಳ್ಳಾಲ ಸಮಿತಿ ವತಿಯಿಂದ ಸಭಾಧ್ಯಕ್ಷ ಯು.ಟಿ ಖಾದರ್ ಹಾಗೂ ಉನ್ನತ ಶಿಕ್ಷಣ ಸಚಿವರಾದ ಎಂ.ಸಿ ಸುಧಾಕರ್ ಅವರ ಗಮನಕ್ಕೆ ತಂದಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿ ಸಮಸ್ಯೆಯನ್ನು ಪರಿಹರಿಸುವ ಭರವಸೆ ನೀಡಿದ್ದಾರೆ. ಆದರೂ ಎಬಿವಿಪಿ ಸಂಘಟನೆಯು ರಾಜಕೀಯ ಲಾಭಕ್ಕೋಸ್ಕರ ವಿಶ್ವವಿದ್ಯಾನಿಲಯ ಆಡಳಿತದ ಸೌಧಕ್ಕೆ ನುಗ್ಗಿ ಹಾನಿ ಮಾಡಿ ಪೊಲೀಸರ ಮೇಲೂ ಹಲ್ಲೆ ನಡೆಸಿದೆ” ಎಂದು ಖಂಡಿಸಿದ್ದಾರೆ.