
ಸಹ್ಯಾದ್ರೀಯಲ್ಲಿ ಏರ್ ಶೋ
ಮಂಗಳೂರು: ನಗರದ ಅಡ್ಯಾರ್ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂದು ಬಾನಂಗಳದಲ್ಲಿ ವಿಶೇಷ ಹಕ್ಕಿಗಳ ಹಾರಾಟ ನಡೆಯಿತು. ಕಾಲೇಜಿನಲ್ಲಿ ವಿದ್ಯಾರ್ಥಿಗಳು ತಯಾರಿಸಿದ ವಿಮಾನಗಳ ಮಾದರಿಗಳ ಪ್ರದರ್ಶನ ನಡೆಯಿತು.
ಅಡ್ಯಾರ್ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ನೇತ್ರಾವತಿ ನದಿ ತೀರದಲ್ಲಿ ಏರ್ ಶೋ ನಡೆಯಿತು. ಬೆಳಗ್ಗೆ 9.30 ರಿಂದ 10.30 ವರೆಗೆ ನಡೆದ ಏರ್ ಶೋ ನಲ್ಲಿ 13 ವಿಮಾನಗಳ ಹಾರಾಟ ನಡೆಯಿತು. ಇದರಲ್ಲಿ ವಿಮಾನಗಳು, ಹೆಲಿಕಾಪ್ಟರ್‌ಗಳ ಮಾಡೆಲ್‌ಗಳು ಹಾರಾಟ ನಡೆಸಿದವು. ಇವುಗಳಲ್ಲಿ 8 ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ತಯಾರಿಸಿದ ವಿಮಾನದ ಮಾದರಿಗಳಾಗಿದ್ದವು.
ವಿಮಾನ ಮತ್ತು ಹೆಲಿಕಾಪ್ಟರ್‌ಗಳ ಮಾಡೆಲ್‌ಗಳ ಹಾರಾಟದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಪ್ರತಿಭೆ ಅನಾವರಣವಾಯಿತು. ಬಾನಂಗಳದಲ್ಲಿ ವಿಮಾನದ ಮಾದರಿಗಳು ವಿವಿಧ ಭಂಗಿಯಲ್ಲಿ ಪ್ರದರ್ಶನ ನೀಡಿದವು. ವಿಮಾನ ಆಕಾಶಕ್ಕೆ ಮುಖ ಮಾಡಿ ನೇರ ನಿಲ್ಲುವುದು, ಹಾರಡುತ್ತಲೇ ಪಲ್ಟಿ ಹೊಡೆಯುವುದು ಆಕರ್ಷಣೀಯವಾಗಿತ್ತು.
ಅಡ್ಯಾರ್ ಸಹ್ಯಾದ್ರಿ ಕಾಲೇಜಿನ ಮೂಲ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಪ್ರಶಾಂತ್ ರಾವ್ ಮಾತನಾಡಿ "ನಾವು ಸಿನರ್ಜಿಯಾ 2024 ಅನ್ನು ಆಯೋಜಿಸಿದ್ದೇವೆ, ಇದು ಸಿನರ್ಜಿಯಾ ಎರಡನೇ ಆವೃತ್ತಿಯಾಗಿದೆ. ಇದರಲ್ಲಿ ಮೂರು ಕಾರ್ಯಕ್ರಮಗಳನ್ನು ಸೇರಿಸಲಾಗಿದೆ. ಒಂದೇ SSಖಿಊ, ಮತ್ತೊಂದು ರೋಬೋಟಿಕ್ಸ್ ಕ್ಲಬ್ ಮತ್ತು ಇನ್ನೊಂದು SಔSಅ. ಇವು ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ. ಏರ್ ಶೋ ಪ್ರದರ್ಶನದಲ್ಲಿ ನಾವು ಹೆಲಿಕಾಪ್ಟರ್‌ಗಳು ಮತ್ತು ವಿಮಾನಗಳನ್ನು ನೋಡಿದ್ದೇವೆ. ಹೆಚ್ಚಿನ ವಿಮಾನಗಳನ್ನು ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ತಯಾರಿಸಿದ್ದಾರೆ. ಅವರೆ ಇದನ್ನು ತಯಾರಿಸಿದರು. ನಾವು ಇದನ್ನು ಮಾಡಲು ಕಾರಣ ಎಂದರೆ ಕಿರಿಯ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುವುದು ಮತ್ತು ಅವರಿಗೆ ಇಲ್ಲಿ ಕೆಲಸ ಮಾಡಲು ಸಹಾಯ ಮಾಡುವುದು. ಇಂದು ಹಾರಾಟ ನಡೆಸಿದ ಶೇಕಡಾ 60 ವಿಮಾನಗಳು ಸಹ್ಯಾದ್ರಿ ಕಾಲೇಜಿನಿಂದ ಬಂದಿವೆ" ಎಂದರು.
ವಿದ್ಯಾರ್ಥಿ ಸಂಯೋಜಕ ತೇಜಸ್ ನಾಯಕ್ ಉಪಸ್ಥಿತರಿದ್ದರು.