
ಬಿಜೆಪಿ ವಿರುದ್ಧ ರಾಜ್ಯದ ಜನರ ತೀರ್ಪು
Monday, November 25, 2024
ಮಂಗಳೂರು: ರಾಜ್ಯದಲ್ಲಿ ನಡೆದ ಮೂರು ಉಪಚುನಾವಣೆಗಳಲ್ಲಿ ಮತ್ತು ದೇಶದ್ಯಾಂತ ನಡೆದ ರಾಜ್ಯಗಳ ಮತ್ತು ಇತರ ಭಾಗಗಳಲ್ಲಿ ನಡೆದ ಉಪಚುನಾವಣೆಗಳಲ್ಲಿ ಬಿಜೆಪಿ ಕೇಂದ್ರ ಸರಕಾರದ ಮತ್ತು ರಾಜ್ಯಗಳಲ್ಲಿ ನಡೆಸುತ್ತಿರುವ ಸರಕಾರದ ವಿರುದ್ಧ, ಜನರು ತೀರ್ಪನ್ನು ನೀಡಿದ್ದಾರೆ. ರಾಜ್ಯದ ಉಪಚುನಾವಣೆಗಳಲ್ಲಿ ಬಿಜೆಪಿ ಜೆಡಿಎಸ್‌ರವರ, ಸಿದ್ಧರಾಮಯ್ಯರವರ ಮೇಲಿನ ಮೂಡ ಹಗರಣವನ್ನು ಅಸ್ತ್ರವನ್ನಾಗಿ ಚುನಾವಣೆಯಲ್ಲಿ ಎದುರಿಸಿದ್ದು, ರಾಜ್ಯದ ಜನತೆ ಸಿದ್ಧರಾಮಯ್ಯರವರ ವ್ಯಕ್ತಿತ್ವ ಮತ್ತು ಅವರ ಪ್ರಾಮಾಣಿಕ ನಾಯಕತ್ವ, ರಾಜ್ಯದ ಜನ ಸ್ವೀಕಾರ ಮಾಡಿ, ಬಿಜೆಪಿಯ ಆರೋಪಗಳಿಗೆ ತಕ್ಕ ಉತ್ತರವನ್ನು ನೀಡಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿ'ಸೋಜಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.