
ವೆನ್‌ಲಾಕ್ ಶಸ್ತ್ರಚಿಕಿತ್ಸೆ: ಉಸ್ತುವಾರಿ ಸಚಿವರಿಂದ ಶ್ಲಾಘನೆ
Monday, November 11, 2024
ಮಂಗಳೂರು: ವೆನ್‌ಲಾಕ್ ಜಿಲ್ಲಾಸ್ಪತ್ರೆಯ ನೂತನ ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ ರೋಗಿಗಳ ಸೇವೆ ಆರಂಭಗೊಂಡಿರುವುದಕ್ಕೆ ಆರೋಗ್ಯ ಮತ್ತು ಜಿಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗಳನ್ನು ಅಭಿನಂದಿಸಿದ್ದಾರೆ.
ಅ.15ರಂದು ಉದ್ಘಾಟನೆಗೊಂಡಿದ್ದ, ಈ ನೂತನ ಶಸ್ತ್ರ ಚಿಕಿತ್ಸಾ ಕಟ್ಟಡದಲ್ಲಿ ನ.7ರಿಂದ ರೋಗಿಗಳ ಶಸ್ತ್ರಚಿಕಿತ್ಸೆಗಳು ಆರಂಭಗೊಂಡು, ಮೊದಲ ದಿನವೇ 7 ಶಸ್ತ್ರಚಿಕಿತ್ಸೆಗಳು ನಡೆದಿರುವುದು ಶ್ಲಾಘನೀಯ. ಮುಂದಿನ ದಿನಗಳಲ್ಲಿ ಹೆಚ್ಚಿನ ಶಸ್ತ್ರಚಿಕಿತ್ಸೆ ನಡೆಸಲು ಕಾರ್ಯ ಯೋಜ ರೂಪಿಸಲಾಗುವುದು.ಈ ನೂತನ ಶಸ್ತ್ರ ಚಿಕಿತ್ಸಾ ಘಟಕದಿಂದ ಜಿಲ್ಲೆಯ ಜನರಿಗೆ ಅತ್ಯುತ್ತಮ ಚಿಕಿತ್ಸಾ ಸೇವೆಗಳು ದೊರಕಲಿವೆ ಎಂದಿದ್ದಾರೆ.