
ಪ್ರತಿಭಾ ಪಿ. ಶೆಣೈ ಅವರಿಗೆ ಕರ್ನಾಟಕ ರತ್ನ ಶ್ರೀ ರಾಜ್ಯ ಪ್ರಶಸ್ತಿ
Tuesday, November 12, 2024
ಮೂಡುಬಿದಿರೆ: ಇಲ್ಲಿನ ಪಾಡ್ಯಾರು ಶಾಲೆಯಲ್ಲಿ ಗೌರವ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಪ್ರತಿಭಾ ಪಿ. ಶೆಣೈ ಅವರಿಗೆ ಬೆಂಗಳೂರಿನ ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನ ರಿ ಮಾಡೆಲಿಂಗ್, ಸಮಾಜ ಸೇವೆ ಹಾಗೂ ನಟನಾ ಕ್ಷೇತ್ರದಲ್ಲಿನ ಸಾಧನೆಗಾಗಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ನಯನ ಸಭಾಂಗಣದಲ್ಲಿ ಕರ್ನಾಟಕ ರತ್ನ ಶ್ರೀ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿದರು. ಅಂತರಾಷ್ಟ್ರೀಯ ಭರತನಾಟ್ಯ ಕಲಾವಿದ ಶ್ರೀ ಶ್ರೀಧರ್, ಶಿವಾಚಾರ್ಯ ಮಹಾಸ್ವಾಮಿಗಳು ಬಿಟಿವಿ ನಿರೂಪಕಿ ಕುಮಾರಿ ಚೈತ್ರ, ಪ್ರತಿಷ್ಠಾನದ ಅಧ್ಯಕ್ಷ ಡಾಕ್ಟರ್ ಗುಣವಂತ ಮತ್ತಿತರರು ಪ್ರಶಸ್ತಿ ಪ್ರಧಾನ ಮಾಡಿದರು.