
ಮೂಡುಬಿದಿರೆ ನ್ಯಾಯಾಲಯದಲ್ಲಿ ಪಕ್ಷಿಕೆರೆ ಕೊಲೆ ಆರೋಪಿಗಳ ಹೈಡ್ರಾಮ
ಮುಲ್ಕಿ: ಪಕ್ಷಿಕೆರೆ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೃತ ಕಾರ್ತಿಕ್ ಪತ್ನಿಯ ತಾಯಿ ನೀಡಿದ ದೂರಿನಂತೆ ಹಾಗೂ ಡೆತ್ ನೋಟಿನ ಅನ್ವಯ ಮೃತ ಕಾರ್ತಿಕ್ ತಾಯಿ ಹಾಗೂ ಸಹೋದರಿಯ ಮೇಲೆ ಪ್ರಕರಣ ದಾಖಲಾಗಿದ್ದು ಮುಲ್ಕಿ ಪೊಲೀಸರು ಆರೋಪಿಗಳನ್ನು ಬಂಧಿಸಿ ಮೂಡಬಿದ್ರೆ ನ್ಯಾಯಾಲಯಕ್ಕೆ ಹಾಜರುಪಡಿಸುವಾಗ ಆರೋಪಿಗಳು ತಲೆ ತಿರುಗಿ ಬಿದ್ದಿದ್ದಾರೆ ಕೂಡಲೇ ಅವರನ್ನು ತಳಿ ಆಸ್ಪತ್ರೆಗೆ ದಾಖಲಿಸಲಾಗಿ ಹೆಚ್ಚಿನ ಮಂಗಳೂರಿನ ವೆನ್ಲಾಕ್ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಅನ್ ಲೈನ್ ಆಟದ ಗೀಳು ಹೊಂದಿದ ಕಾರ್ತಿಕ್ ಭಟ್ ಸಾಕಷ್ಟು ಹಣ ಕಳೆದುಕೊಂಡಿರಬೇಕು ಈ ಕಾರಣದಿಂದ ಹಲವರ ಬಳಿ ಸಾಲ ಪಡೆದಿದ್ದು ಹಿಂದಿರುಗಿಸಲಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಿದ್ದು, ಕೆಲವು ಸಮಯದ ಹಿಂದೆ ಸ್ಥಳೀಯರೊಬ್ಬರ ಬಳಿ ಒಂದು ಲಕ್ಷ ಸಾಲ ನೀಡುವಂತೆ ಕೇಳುತ್ತಿದ್ದ, ನಂತರ ತನ್ನಲ್ಲಿದ್ದ ಉಂಗುರವನ್ನು ಅಡವಿಟ್ಟಿದ್ದ ಎನ್ನಲಾಗಿದೆ, ಸ್ಥಳೀಯ ವ್ಯಕ್ತಿಯೋರ್ವರು ಕಾರ್ತಿಕ್ ಕೆಲಸ ಮಾಡುತ್ತಿದ್ದ ಸಂಸ್ಥೆಯಲ್ಲಿ ಚಿನ್ನದ ಒಡವೆ ಇಟ್ಟಿದ್ದು, ಈ ಮೂಲಕ 3 ಲಕ್ಷ ರೂ ಸಾಲ ಪಡೆದಿದ್ದರು. ಇದೀಗ ಅದನ್ನು ಪರಿಶೀಲನೆ ಮಾಡುವಾದ ಆ ಚಿನ್ನದ ಒಡವೆ, ಅಡವಿಟ್ಟು ನಾಲ್ಕು ತಿಂಗಳಲ್ಲೇ ಅಲ್ಲಿಂದ ನಾಪತ್ತೆಯಾಗಿದೆ ಎಂದು ಸ್ಥಳೀಯ ವ್ಯಕ್ತಿಯೋರ್ವರು ಆರೋಪಿಸುತ್ತಿದ್ದಾರೆ. ಕಾರ್ತಿಕ್ ಪತ್ನಿ ಪ್ರಿಯಾಂಕ, ಪ್ರತೀ ದಿನ ಸುರತ್ಕಲ್ ಗೆ ಜಿಮ್ ಗೆ ಹೋಗುತ್ತಿದ್ದು, ನಂತರ ಮನೆಯ ಕೋಣೆಯ ಕೋಣೆಯಲ್ಲಿ ಇರುತ್ತಿದ್ದಳು ಇಡೀ ದಿನ ಮನೆಯ ಕೊಣೆಯಲ್ಲಿ ಏನು ಮಾಡುತ್ತಿದ್ದಳು ಎಂಬುದೇ ಪ್ರಶ್ನೆಯಾಗಿದೆ!!
ಈ ನಡುವೆ ಕೊಲೆ ಪ್ರಕರಣದ ಕುರಿತು ತನಿಖೆ ನಡೆಸುತ್ತಿರುವ ಪೊಲೀಸರಿಗೆ ಕಾರ್ತಿಕ್ ಭಟ್ ಹಾಗೂ ಪತ್ನಿಯ ಮೊಬೈಲ್ ಕೊಲೆ ನಡೆದ ರೂಮ್ ನ ಟಾಯ್ಲೆಟ್ ಕಮೋಡ್ ನಲ್ಲಿ ಪತ್ತೆಯಾಗಿದ್ದು ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ