ಈಜು ಸ್ಪರ್ಧೆ: ಫಿಲೋಮಿನಾ ಪ.ಪೂ. ಕಾಲೇಜಿನ ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ

ಈಜು ಸ್ಪರ್ಧೆ: ಫಿಲೋಮಿನಾ ಪ.ಪೂ. ಕಾಲೇಜಿನ ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ


ಪುತ್ತೂರು: ಕರ್ನಾಟಕ ಅಂಡರ್ ವಾಟರ್ ಸ್ಪೋರ್ಟ್ಸ್ ಮತ್ತು ಫಿನ್ ಸ್ವಿಮ್ಮಿಂಗ್ ಅಸೋಸಿಯೇಷನ್ ಆಯೋಜನೆಯಲ್ಲಿ ನ.3 ರಂದು ಪುತ್ತೂರು ಡಾ. ಶಿವರಾಮ ಕಾರಂತ ಬಾಲವನ ಈಜು ಕೊಳದಲ್ಲಿ ನಡೆದ ಎರಡನೇ ಕರ್ನಾಟಕ ರಾಜ್ಯ ಫಿನ್ ಸ್ವಿಮ್ಮಿಂಗ್ ಚಾಂಪಿಯನ್ ಶಿಪ್-2024ರಲ್ಲಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ನಾಲ್ಕು ವಿದ್ಯಾರ್ಥಿಗಳು ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಪ್ರಥಮ ವಿಜ್ಞಾನ ವಿಭಾಗದ ಅರ್. ಅಮನ್ ರಾಜ್ ಇವರು ಬೈ-ಫಿನ್ 100ಮೀ ಮತ್ತು 50ಮೀ ಅಪ್ನಿಯದಲ್ಲಿ ಚಿನ್ನ ಹಾಗೂ ಬೈ-ಫಿನ್ 200ಮೀ ಮತ್ತು ಬೈ-ಫಿನ್ 50ಮೀ.ನಲ್ಲಿ ಬೆಳ್ಳಿ ಪದಕ, ದಿಗಂತ್ ವಿ.ಎಸ್. ಮೊನೋ-ಫಿನ್ 100ಮೀ, ಬೈ-ಫಿನ್ 200ಮೀ.ನಲ್ಲಿ ಚಿನ್ನ ಮತ್ತು 50ಮೀ ಅಪ್ನಿಯದಲ್ಲಿ ಬೆಳ್ಳಿ ಪದಕ, ಅನ್ವಿತ್ ರೈ ಬರಿಕೆ ಮೊನೋ-ಫಿನ್ 50ಮೀ, ಬೈ-ಫಿನ್ 50ಮೀ.ನಲ್ಲಿ ಚಿನ್ನ ಹಾಗೂ ಮೊನೋ-ಫಿನ್ 100ಮೀ, ಬೈ-ಫಿನ್ 100ಮೀ.ನಲ್ಲಿ ಬೆಳ್ಳಿ ಪದಕ ಮತ್ತು ಪ್ರಾಧಿ ಕ್ಲಾರೆ ಪಿಂಟೋ ಮೊನೋ-ಫಿನ್ 50ಮೀ, ಬೈ-ಫಿನ್ 50ಮೀ ಮತ್ತು ಬೈ-ಫಿನ್ 100ಮೀ.ನಲ್ಲಿ ಬೆಳ್ಳಿ ಪದಕವನ್ನು ಪಡೆದುಕೊಂಡಿರುತ್ತಾರೆ.

ಇವರುಗಳಿಗೆ ಪರ್ಲಡ್ಕದ ಬಾಲವನದ ಅಕ್ವೆಟಿಕ್ ಕ್ಲಬ್‌ನ ಈಜು ತರಬೇತುದಾರರಾದ ಪಾರ್ಥ ವಾರಣಾಸಿ, ನಿರೂಪ ಜಿ.ಆರ್., ದೀಕ್ಷಿತ್ ರಾವ್ ಮತ್ತು ರೋಹಿತ್ ಪ್ರಕಾಶ್ ಅವರು ತರಬೇತಿ ನೀಡುತ್ತಿದ್ದಾರೆ.

ಕಾಲೇಜಿನ ಪ್ರಾಂಶುಪಾಲ ರೆ.ಫಾ. ಅಶೋಕ್ ರಾಯನ್ ಕ್ರಾಸ್ತಾ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ಏಲಿಯಾಸ್ ಪಿಂಟೋ ಹಾಗೂ ರಾಜೇಶ್ ಮೂಲ್ಯ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article