
ಬ್ರಹ್ಮಾವರ ತಾಲೂಕು ಕಚೇರಿ ಲಿಫ್ಟ್ ದುರಸ್ತಿಗೆ ಶಾಸಕ ಮಂಜುನಾಥ ಭಂಡಾರಿ ಮನವಿ
Wednesday, November 27, 2024
ಉಡುಪಿ: ಕಳೆದ ಒಂದು ತಿಂಗಳಿಂದ ಬ್ರಹ್ಮಾವರ ತಾಲೂಕು ಕಚೇರಿಯ ಲಿಫ್ಟ್ ಕೆಟ್ಟಿದ್ದು ದುರಸ್ತಿ ಕಾಣದೇ ಸಾರ್ವಜನಿಕರಿಗೆ ತೊಂದರೆಯಾಗಿದೆ. ಕಚೇರಿಯ ಒಂದನೇ ಮಹಡಿಯಲ್ಲಿರುವ ಉಪನೋಂದಣಾಧಿಕಾರಿ ಕಚೇರಿಗೆ ಆಗಮಿಸುವ ವಯೋವೃದ್ಧರನ್ನು ಹೊತ್ತುಕೊಂಡೇ ಸಾಗಿಸುವ ದುಸ್ಥಿತಿ ಕಂಡು ಬರುತ್ತಿದ್ದು, ಜನರು ಪ್ರತಿಭಟನೆ ಹಾದಿ ಹಿಡಿಯುವ ಮೊದಲು ಶೀಘ್ರ ಲಿಫ್ಟ್ ಅನ್ನು ದುರಸ್ತಿಗೊಳಿಸಬೇಕೆಂದು ವಿಧಾನ ಪರಿಷತ್ ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಉಡುಪಿ ಜಿಲ್ಲಾಧಿಕಾರಿ ಅವರಿಗೆ ಪತ್ರ ಮುಖೇನ ಮನವಿ ಮಾಡಿದ್ದಾರೆ.
ಸಾರ್ವಜನಿಕರ ಹಿತದೃಷ್ಟಿಯಿಂದ ತಾಲೂಕು ಕಚೇರಿಯ ಲಿಫ್ಟ್ ಶೀಘ್ರ ದುರಸ್ತಿಗೊಳಪಡಿಸುವ ಅಗತ್ಯವಿದೆ. ಈ ಮೂಲಕ ಕಚೇರಿಗೆ ನಿತ್ಯ ಆಗಮಿಸುವವರಿಗೆ ಅಡಚಣೆಯಾಗುವುದನ್ನು ತಪ್ಪಿಸಲು ಜಿಲ್ಲಾಡಳಿತ ಸೂಕ್ತ ಕ್ರಮ ಜರುಗಿಸಬೇಕು ಎಂದು ಶಾಸಕರು ಕೋರಿದ್ದಾರೆ.