ಸೌದಿಯಲ್ಲಿ ವಗ್ಗ ನಿವಾಸಿ ಅಪಘಾತಕ್ಕೆ ಬಲಿ

ಸೌದಿಯಲ್ಲಿ ವಗ್ಗ ನಿವಾಸಿ ಅಪಘಾತಕ್ಕೆ ಬಲಿ

ಬಂಟ್ವಾಳ: ಸೌದಿ ಅರೇಬಿಯಾದ ತಬೂಕ್ ಸಮೀಪದ ಅಲ್ ಉಲಾ ಎಂಬಲ್ಲಿ ಸೋಮವಾರ ನಡೆದ ಕಾರು ಅಪಘಾತದಲ್ಲಿ ಬಂಟ್ವಾಳ ತಾಲೂಕಿನ ಮೇಲಿನ ವಗ್ಗ ನಿವಾಸಿಯೋರ್ವರು ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ.

ಮೃತರನ್ನು ಮೇಲಿನ ವಗ್ಗದ ದಿವಂಗತ ಮುಹಮ್ಮದ್ ಯಾನೆ ಪುತ್ತುಬಾವ ಎಂಬವರ ಪುತ್ರ ಇಬ್ರಾಹೀಮ್ ನವಾಜ್ (35) ಎಂದು ಗುರುತಿಸಲಾಗಿದೆ. ಬಿ.ಸಿ. ರೋಡು ಸಮೀಪದ ಮಿತ್ತಬೈಲು ಎಂಬಲ್ಲಿ ಕಾರು ಉದ್ಯಮ ನಡೆಸುತ್ತಿದ್ದ ನವಾಜ್ ಬಳಿಕ ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದರು.

ಸುಮಾರು ಆರು ತಿಂಗಳ ಹಿಂದೆಯಷ್ಟೇ ಉದ್ಯೋಗಕ್ಕಾಗಿ ಸೌದಿ ಅರೇಬಿಯಾಕ್ಕೆ ತೆರಳಿದ್ದರು. ಸೋಮವಾರ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿ ಅವರು ಮೃತ್ತಪಟ್ಟಿದ್ದಾರೆ ಎನ್ನಲಾಗಿದೆ. ಮೃತರು ಪತ್ನಿ, ತಾಯಿ ಮತ್ತು ಕುಟುಂಬವನ್ನು ಅಗಲಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article