
ಬೈಕ್ ತಡೆದು ತಂಡದಿಂದ ಹಲ್ಲೆ
ಬಂಟ್ವಾಳ: ಕಾರೊಂದರಲ್ಲಿ ಬಂದಿದ್ದ 3-4 ಮಂದಿಯ ತಂಡ ಬೈಕನ್ನು ತಡೆದು ನಿಲ್ಲಿಸಿ ಸವಾರರಿಗೆ ಅವಾಚ್ಯವಾಗಿ ನಿಂದಿಸಿ ಹಲ್ಲೆಗೈದ ಘಟನೆ ಸರಪಾಡಿ ಗ್ರಾಮದ ಮಿಯಾರಪಲ್ಕೆ ಎಂಬಲ್ಲಿ ಭಾನುವಾರ ಸಂಜೆ ನಡೆದಿದೆ.
ಬೆಳ್ತಂಗಡಿ ತಾ.ನ ಮಾಚಾರು ಪಾದೆ ನಿವಾಸಿಗಳಾದ ಸುಹಾನ್ ನಾಸೀರ್ ಮತ್ತು ಶಿಫಾನ್ ಅವರು ಹಲ್ಲೆಗೊಳಗಾಗಿ ಬಂಟ್ಚಾಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬದ್ರುದ್ದೀನ್, ಸಂಶುದ್ದೀನ್, ಮುಸ್ತಾಫ, ಜಲೀಲ್ ಹಾಗೂ ಇತರರು ಅಕ್ರಮಕೂಟ ಸೇರಿಕೊಂಡು ಈ ಕೃತ್ಯ ನಡೆಸಿದ್ದಾರೆಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ನೀಡಲಾದ ದೂರಿನಲ್ಲಿ ತಿಳಿಸಲಾಗಿದೆ.
ಅಜಿಲ ಮೊಗರ್ ಊರುಸ್‌ಗೆಂದು ನಾಸೀರ್ ಹಾಗೂ ಶಿಫಾನ್ ಬೈಕ್‌ನಲ್ಲಿ ಬಂದಿದ್ದು, ಸರಪಾಡಿ ಬಸ್ ನಿಲ್ದಾಣ ತಲುಪಿದಾಗ ಕಾರಿನಲ್ಲಿ ಹಿಂಬಾಲಿಸಿ ಕೊಂಡು ಬಂದಿದ್ದ ಆರೋಪಿಗಳು ಬೈಕನ್ನುತಡೆದು ನಿಲ್ಲಿಸಿ ಹಲ್ಲೆಗೈದಿದ್ದಾರೆಂದು ಆರೋಪಿಸಲಾಗಿದೆ. ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿ ಈ ಘಟನೆ ನಡೆದಿದೆಯೆನ್ನಲಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.