ಪಂಜಿಕಲ್ಲು ಮನೆಗೆ ದಾಳಿ: ಕಳ್ಳಬಟ್ಟಿ ಸಾರಾಯಿ ಪತ್ತೆ: ಆರೋಪಿಯ ಬಂಧನ
Wednesday, December 18, 2024
ಬಂಟ್ವಾಳ: ಇಲ್ಲಿಗೆ ಸಮೀಪದ ಪಂಜಿಕಲ್ಲು ಗ್ರಾಮದ ಕಂಬಲ್ದಡ್ಡ ಎಂಬಲ್ಲಿರುವ ಮನೆಯೊಂದಕ್ಕೆ ಬಂಟ್ವಾಳ ವಲಯ ಅಬಕಾರಿ ಉಪನಿರೀಕ್ಷಕರ ನೇತೃತ್ವದ ತಂಡ ಬುಧವಾರ ಬೆಳಿಗ್ಗೆ ದಾಳಿ ನಡೆಸಿ ಕಳ್ಳಬಟ್ಟಿ ಸಾರಾಯಿಯನ್ನು ಪತ್ತೆ ಹಚ್ಚಿದ್ದಾರೆ.
ಖಚಿತ ವರ್ತಮಾನದ ಮೇರೆಗೆ ಬಂಟ್ವಾಳ ವಲಯ ಅಬಕಾರಿ ಉಪನಿರೀಕ್ಷಕರಾದ ರಾಜ ನಾಯ್ಕ್ ಮತ್ತವರ ಸಿಬ್ಬಂದಿಗಳು ಪಂಜಿಕಲ್ಲು ಗ್ರಾಮದ ಕಂಬಲ್ದಡ್ಡ ನಿವಾಸಿ ರುಕ್ಮಯ್ಯ ಪೂಜಾರಿ ಎಂಬವರ ಮನೆಗೆ ಈ ದಾಳಿ ಕಾರ್ಯಾಚರಣೆ ನಡೆಸಿದೆ.
ಈ ಸಂದರ್ಭ ಆರೋಪಿಯನ್ನು ಬಂಧಿಸಿದ ಅಬಕಾರಿ ಉಪನಿರೀಕ್ಷಕರ ನೇತೃತ್ವದ ತಂಡ ಸ್ಥಳದಲ್ಲಿದ್ದ 55 ಲೀ. ಬೆಲ್ಲದ ಕೊಳೆ ಮತ್ತು 1.5 ಲೀಟರ್ ಕಳ್ಳಬಟ್ಟಿ ಸಾರಾಯಿ ಹಾಗೂ ಕಳ್ಳಬಟ್ಟಿ ತಯಾರಿಸುವ ಸಾಮಗ್ರಿಗಳನ್ನು ವಶಪಡಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿ ಮುಂದಿನ ತನಿಖೆ ನಡೆಸುತ್ತಿದ್ದಾರೆ.