ಶಾಲಾ ಮೈದಾನದಲ್ಲಿ ಅಪಾಯಕಾರಿ ಹೊಂಡ

ಶಾಲಾ ಮೈದಾನದಲ್ಲಿ ಅಪಾಯಕಾರಿ ಹೊಂಡ


ಬಂಟ್ವಾಳ: ಬಿ.ಸಿ.ರೋಡಿನ ಅಜ್ಜಿಬೆಟ್ಟು  ಶಾಲಾ ಮೈದಾನದಲ್ಲಿ  ಅಪಾಯವನ್ನು ಆಹ್ವಾನಿಸುವ ರೀತಿಯಲ್ಲಿ ಬೃಹದಾಕಾರದ ಹೊಂಡವೊಂದು ಸೃಷ್ಟಿಯಾಗಿದೆ. ಕೆಲವು ಸಮಯಗಳಿಂದ ಚಿಕ್ಕದಾಗಿ ಕಾಣಿಸಿಕೊಂಡಿದ್ದ  ಈ ಹೊಂಡ ಈಗ ಬೃಹದಾಗಿ ಬಾಯ್ದೆರೆದು ಅಪಾಯವನ್ನು ಆಹ್ವಾನಿಸುತ್ತಿದೆ.

ಬಿ.ಮೂಡ ಗ್ರಾಮದ ಅಜ್ಜಿಬೆಟ್ಟುವಿನಲ್ಲಿ ಸರಕಾರಿ ಹಿರಿಯ ಪಾಥಮಿಕ  ಮತ್ತು ಪ್ರೌಢ ಶಾಲೆಗಳಿದ್ದು  ಎರಡೂ ಶಾಲೆಗಳ ನೂರಾರು ಮಕ್ಕಳು ತಮ್ಮ ದೈಹಿಕ  ಚಟುವಟಿಕೆಗಳಿಗೆ ಈ ಮೈದಾನವನ್ನೇ ಉಪಯೋಗಿಸುತ್ತಿದ್ದಾರೆ.

ಪ್ರಸ್ತುತ ಶಾಲಾ ಆಟದ ಮೈದಾನದ ಮಧ್ಯದಲ್ಲಿ ಹೊಂಡವೊಂದು ನುಂಗುವಂತೆ ಬಾಯ್ದೆರೆದಿರುವುದರಿಂದ ಮಕ್ಕಳ ದೈಹಿಕ ಚಟುವಟಿಕೆಗೂ ತೊಂದರೆಯಾಗಿದೆ.

ಈ ಹೊಂಡ ಹೊರನೋಟಕ್ಕೆ ಕಾಣಿಸದಿದ್ದರೂ ಹತ್ತಿರಕ್ಕೆ ಬಂದಾಗ ಗೋಚರವಾಗುತ್ತದೆ. ಶಾಲೆಯಿಂದ ಸುಮಾರು 100 ಮೀಟರ್ ದೂರದಲ್ಲಿ ಮೈದಾನವಿರುವ ಕಾರಣ, ಶಾಲೆಯ ಗಮನಕ್ಕೆ ಮಾಹಿತಿ ಬಂದಾಕ್ಷಣ ಸಂಬಂಧಪಟ್ಟವರ ಗಮನಕ್ಕೆ ತಂದಿದ್ದಾರೆ. ಆದರೆ ಈ ಹೊಂಡವನ್ನು ಯಾರು ಮಾಡಿದ್ದು, ಹೇಗೆ ಉದ್ಬವಿಸಿತು ಎಂಬುದು ಮಾತ್ರ ಇನ್ನೂ ನಿಗೂಢವಾಗಿದೆ. 

ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ ಸರಕಾರಿ ಶಾಲೆಯ ದೊಡ್ಡ ಮೈದಾನವಾಗಿರುವ ಅಜ್ಜಿಬೆಟ್ಟು ಗ್ರೌಂಡನ್ನು  ಅನುದಾನದ ಕೊರತೆಯಿಂದಾಗಿ ಇದನ್ನು ಸಮರ್ಪಕವಾಗಿ  ರೂಪುಗೊಳಿಸಲಾಗಿಲ್ಲ.  ಈ ಹಿಂದೆ ಮೈದಾನದಲ್ಲೇ ರಾಷ್ಟ್ರೀಯ ಮಟ್ಟದ ವಾಲಿಬಾಲ್ ಪಂದ್ಯಾಟ ಸಹಿತ ವಿವಿಧ ಕ್ರೀಡಾಕೂಟ ನಡೆದಿತ್ತು ಸದ್ಯ ಈ ಮೈದಾನಕ್ಕ ಆವರಣಗೋಡೆ ನಿರ್ಮಾಣ ಸಹಿತ ಅಭಿವೃದ್ಧಿ ಕಾರ್ಯಗಳು ಆಗಬೇಕಾಗಿದೆ. ಸದ್ಯ ಈ ಮೈದಾನ  ವಾಹನ ಪಾರ್ಕಿಂಗ್ಗೆ ಸೀಮಿತವಾದಂತಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article