ಊರಿನ ಶಾಲೆ ಬೆಳಗಿದರೆ ಊರೆ ಬೆಳಗಿದಂತೆ: ಜಯರಾಮ್ ರೈ

ಊರಿನ ಶಾಲೆ ಬೆಳಗಿದರೆ ಊರೆ ಬೆಳಗಿದಂತೆ: ಜಯರಾಮ್ ರೈ


ಬಂಟ್ವಾಳ: ಒಂದು ಊರಿನ ಶಾಲೆಯಲ್ಲಿ ಎಲ್ಲಾ ಜಾತಿ ಧರ್ಮದ ವಿದ್ಯಾರ್ಥಿಗಳು ಒಟ್ಟು ಸೇರಿ ವಿದ್ಯಾಭ್ಯಾಸ ಮಾಡುವುದರಿಂದ ಶಾಲೆ ಎಂಬುದು

ಸರ್ವ ಧರ್ಮಿಯರ ದೇಗುಲವಾಗಿದ್ದು, ಶಾಲೆಗಳು ಬೆಳಗಿದರೆ ಇಡೀ ಊರೇ ಬೆಳಗಿದಂತೆ ಎಂದು ಕಲ್ಲಡ್ಕ ರೈತರ ಸೇವಾ ಸಹಕಾರಿ ಬ್ಯಾಂಕಿನ ನಿರ್ದೇಶಕ ಜಯರಾಮ್ ರೈ ಗುಡ್ಡೆಮಾರು ಹೇಳಿದರು.

ಬಂಟ್ವಾಳ ತಾಲೂಕಿನ ಬೋಳಂತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಿದ ಶಾಲಾ ವಾರ್ಷಿಕೋತ್ಸವ 2024-25 ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಬಶೀರ್ ನಾರಂಕೋಡಿ ವಹಿಸಿದ್ದರು. ಈ ಸಂದರ್ಭದಲ್ಲಿ ಶಾಲಾ ಕೆ.ಜಿ. ಶಿಕ್ಷಕಿ, ಅಕ್ಷರ ದಾಸೋಹ ಸಿಬ್ಬಂದಿಗಳನ್ನು ಗೌರವಿಸಲಾಯಿತು.

ವಾರ್ಷಿಕೋತ್ಸವದ ನಿಮಿತ್ತ ನಡೆಸಲಾದ ಸ್ಪರ್ಧೆಯ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಸಭಾ ಕಾರ್ಯಕ್ರಮದ ಮೊದಲು ಸ್ಥಳೀಯ ಅಂಗನವಾಡಿ ಕೇಂದ್ರದ ಪುಟಾಣಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.

ಬೋಳಂತೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶಾಲಿನಿ, ಉಪಾಧ್ಯಕ್ಷ ಯಾಕೂಬ್ ದಂಡೆಮಾರ್, ಸದಸ್ಯರಾದ ಮಹಾಲಕ್ಷ್ಮಿ, ಅಶ್ರಫ್, ಶಾಲಾ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಸೌರತ್, ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ಅಬ್ಬಾಸ್ ಆಲಿ, ಸದಸ್ಯರುಗಳಾದ ಮಹಮದ್ ಕುಂಞ, ಸೆಕಿನ, ಪುಷ್ಪ, ದುಲೈಕಾ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಸಂಧ್ಯಾ, ಊರಿನ ಹಿರಿಯರಾದ ಉಸ್ಮಾನ್ ಬಂಗಾರಕೋಡಿ, ಅಬ್ದುಲ್ ಮಜಿದ್, ಗ್ರಾಮಾಭಿವೃದ್ಧಿ ಯೋಜನೆಯ ಬೋಳಂತೂರು ಒಕ್ಕೂಟ ಅಧ್ಯಕ್ಷೆ ಸೀತಾ, ನಿವೃತ್ತ ಶಿಕ್ಷಕ ಕೂಸಪ್ಪ, ಟೈಲರ್ ಹಮೀದ್, ಶರೀಫ್, ನಿವೃತ್ತ ದೈಹಿಕ ಶಿಕ್ಷಕ ಶಂಕರ್ ವಿ., ಕರಿಂ, ಶಿಕ್ಷಣ ತಜ್ಞ ಇಸ್ಮಾಯಿಲ್ ಮತ್ತಿತರರು ಉಪಸ್ಥಿತರಿದ್ದರು.

ಶಾಲಾ ಮುಖ್ಯ ಶಿಕ್ಷಕಿ ಗೀತಾ ಎಸ್. ಸ್ವಾಗತಿಸಿ, ದೈಹಿಕ ಶಿಕ್ಷಣ ಶಿಕ್ಷಕ ಹರೀಶ್ ವಿ. ವರದಿ ವಾಚಿಸಿ, ಅತಿಥಿ ಶಿಕ್ಷಕಿ ಸೌಮ್ಯ ಬಿ. ಬಹುಮಾನಿತರ ಪಟ್ಟಿ ವಾಚಿಸಿ, ಶಿಕ್ಷಕ ಪರಮೇಶ್ವರಯ್ಯ ವಂದಿಸಿದರು. ಜಿಪಿಟಿ ಶಿಕ್ಷಕಿ ರೂಪಶ್ರೀ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರಾದ ಧರಣೇಶ್, ಉಮೇಶ್, ಲೋಲಾಕ್ಷಿ. ಕೆ., ಮೇರಿ ಜಾನೆಟ್ ವಾಸ್, ಸುಕೈನ ಸಹಕರಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article