ಶಿತಾ೯ಡಿ-ಮೂಡುಕೊಣಾಜೆ ಗ್ರಾಮಗಳಿಗೆ ಪ್ರತ್ಯೇಕ ಸಹಕಾರಿ ಸಂಘ

ಶಿತಾ೯ಡಿ-ಮೂಡುಕೊಣಾಜೆ ಗ್ರಾಮಗಳಿಗೆ ಪ್ರತ್ಯೇಕ ಸಹಕಾರಿ ಸಂಘ


ಮೂಡುಬಿದಿರೆ: ಕಲ್ಲಬೆಟ್ಟು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧೀನಕ್ಕೊಳಪಟ್ಟಿರುವ ಶಿರ್ತಾಡಿ ಪಡು ಮೂಡುಕೊಣಾಜೆ ಗ್ರಾಮಗಳಿಗೆ ಪ್ರತ್ಯೇಕ ಸಹಕಾರಿ ಸಂಘ ಒದಗಿ ಬಂದಿದೆ.

ಈ ಮೂಲಕ ತಾಲೂಕಿನ ಶಿರ್ತಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಜನತೆಯ ಪ್ರತ್ಯೇಕ ಸಹಕಾರಿ ಸಂಘದ  ಬೇಡಿಕೆ ಈಡೇರಿದಂತಾಗಿದ್ದು ಇದಕ್ಕೆ ಶಿರ್ತಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ(ನಿ.) ಶಿರ್ತಾಡಿ ಎಂಬುದಾಗಿ ನಾಮಕರಣಗೊಳಿಸಿ ಪ್ರಮಾಣಿಕರಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಕಲ್ಲಬೆಟ್ಟು ಗ್ರಾಮಕ್ಕೂ ಪ್ರತ್ಯೇಕ ಕಲ್ಲಬೆಟ್ಟು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ (ನಿ.)ಕಲ್ಲಬೆಟ್ಟು ಜಾರಿಗೊಳ್ಳಲಿದೆ. ಈ ಸಂಘಗಳಿಗೆ ಶೀಘ್ರದಲ್ಲೇ ಆಡಳಿತಧಿಕಾರಿ ನೇಮಕ ನಡೆಯಲಿದೆ ಎಂದು ಪ್ರತ್ಯೇಕ ಸಹಕಾರಿ ಸಂಘದ ಬೇಡಿಕೆ ಮಂಡಿಸಿ ಸುದೀರ್ಘ ಹೋರಾಟ ನಡೆಸಿದ್ದ ಸುಕೇಶ್ ಶೆಟ್ಟಿ ಎದಮೇರು ತಿಳಿಸಿದ್ದಾರೆ.

ಪ್ರತ್ಯೇಕ ಸಹಕಾರಿ ಸಂಘದ ಪ್ರಮಾಣ ಪತ್ರವನ್ನು ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಸಂಘಗಳ ಉಪನಿಭಂದಕರಾದ ಹೆಚ್. ಎನ್. ರಮೇಶ್ ಅವರು ಸುಕೇಶ್ ಶೆಟ್ಟಿಯವರ ತಂಡಕ್ಕೆ ಇತ್ತೀಚೆಗೆ ಮಂಗಳೂರ್ ನಲ್ಲಿ ಹಸ್ತಾಂತರ ಮಾಡಿದ್ದಾರೆ.

ಊರ ಪ್ರಮುಖರಾದ ಎಸ್. ಪ್ರವೀಣ್ ಕುಮಾರ್, ಲತಾ ಹೆಗ್ಡೆ, ಜಯಾನಂದ್ ಶೆಟ್ಟಿ, ಶಶಿಕುಮಾರ್ ರೈ, ಸಂತೋಷ್ ಶೆಟ್ಟಿ, ಸಂತೋಷ ಅಂಚನ್ ದಿನೇಶ್ ಶೆಟ್ಟಿ ತಿಮಾರ್, ಕೃಷ್ಣ ಭಟ್, ಸತೀಶ್ ಕೆ.ಸಿ., ಲಕ್ಷ್ಮಣ್ ಕೋಟ್ಯಾನ್ ಈ ಸಂದರ್ಭದಲ್ಲಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article