
ತಾಲೂಕು ಕಚೇರಿ ಅವರಣದಿಂದ ಬೈಕ್ ಕಳವು
Saturday, December 28, 2024
ಬಂಟ್ವಾಳ: ಖಾಸಗಿ ಸರ್ವೇಯರ್ ವೊರ್ವರ ಬೈಕ್ ಬಿ.ಸಿ. ರೋಡಿನ ತಾಲೂಕು ಕಚೇರಿಯ ಆವರಣದಿಂದ ಕಾಣೆಯಾದ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪುತ್ತೂರು ತಾಲೂಕಿನ ಒಳಮೊಗ್ರು ನಿವಾಸಿ ನಿವಾಸಿ ಸುಜಿತ್ ಪಿ.ಎಸ್. ಅವರಿಗೆ ಸೇರಿದ ಬೈಕ್ ಕಳವಾಗಿದೆ ಎಂದು ದೂರು ದಾಖಲಾಗಿದೆ. ಹೆಚ್ಚಾಗಿ ಗುರುಪುರ, ಕೈಕಂಬ ಕಡೆಗಳಲ್ಲಿ ಸರ್ವೆ ಕೆಲಸಗಳನ್ನು ಮಾಡುತ್ತಿದ್ದು, ಡಿ.25 ರಂದು ಬಂಟ್ವಾಳ ತಾಲೂಕು ಕಚೇರಿಯ ಆವರಣದಲ್ಲಿ ಬೈಕನ್ನು ನಿಲ್ಲಿಸಿ ಮನೆಗೆ ಹೋಗಿದ್ದು, ಮರುದಿನ ಬಂದು ನೋಡಿದಾಗ ನಿಲ್ಲಿಸಿದ್ದ ಸ್ಥಳದಿಂದ ಬೈಕ್ ಕಾಣೆಯಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.