ಮಂಗಳೂರು: ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ ನವೆಂಬರ್ ತಿಂಗಳಲ್ಲಿ ನಡೆಸಿದ ಸಿ.ಎ. ಅಂತಿಮ ಪರೀಕ್ಷೆಯಲ್ಲಿ ಹರಿಖಂಡಿಗೆಯ ಕಂದೇಲ್ ಬೆಟ್ಟು ಸಾಂತಪ್ಪ ಪೈ ಮತ್ತು ಅನುರಾಧ ಪೈ ದಂಪತಿಯ ಪುತ್ರ ರಾಮಚಂದ್ರ ಪೈ ಅವರು ತೇರ್ಗಡೆಯಾಗಿದ್ದಾರೆ. ಇವರು ಸಿಎ ಗಿರೀಶ್ ಪೈ ಬಿ. ಬ್ರಹ್ಮಾವರ ಅವರ ಮಾರ್ಗದರ್ಶನದಲ್ಲಿ ಆರ್ಟಿಕಲ್ ಶಿಪ್ ಮುಗಿಸಿದ್ದಾರೆ.