ಅಮಾಸೆ ಕರಿಯ ಅಮವಾಸ್ಯೆ ತೀರ್ಥ ಸ್ಥಾನಕ್ಕೆ ತೆರಳಿದ್ದ ಬಾಲಕರಲ್ಲಿ ಇಬ್ಬರು ನೀರು ಪಾಲು ಓರ್ವನ ರಕ್ಷಣೆ

ಅಮಾಸೆ ಕರಿಯ ಅಮವಾಸ್ಯೆ ತೀರ್ಥ ಸ್ಥಾನಕ್ಕೆ ತೆರಳಿದ್ದ ಬಾಲಕರಲ್ಲಿ ಇಬ್ಬರು ನೀರು ಪಾಲು ಓರ್ವನ ರಕ್ಷಣೆ

ಹೆಜಮಾಡಿ: ಅಮಾಸೆ ಕರಿಯ ಅಮವಾಸ್ಯೆ ತೀರ್ಥ ಸ್ಥಾನಕ್ಕೆ ತೆರಳಿದ್ದ ಬಾಲಕರಲ್ಲಿ ಇಬ್ಬರು ನೀರು ಪಾಲಾಗಿದ್ದು, ಓರ್ವನ ರಕ್ಷಣೆ ಮಾಡಲಾಗಿದೆ.

ಮೃತ ಬಾಲಕ ಓರ್ವ ಹೆಜಮಾಡಿ ಟೋಲ್ ಸಿಬ್ಬಂದಿಯೊರ್ವರ ಪುತ್ರ ಅಮಾನ್ (19), ಹೆಜಮಾಡಿ ಎಸ್.ಎಸ್. ರಸ್ತೆ ನಿವಾಸಿ ಅಕ್ಷಯ್ (19) ನೀರುಪಾಲದ ಬಾಲಕರು.

ಹೆಜಮಾಡಿ ನಿವಾಸಿ ಪವನ್ (19) ಎಂಬಾತನನ್ನು ರಕ್ಷಣೆ ಮಾಡಲಾಗಿದೆ.

ಗೆಳೆಯರು ಆರು ಮಂದಿ ಸೇರಿ ಹೆಜಮಾಡಿಯಲ್ಲಿ ತೀರ್ಥ ಸ್ಥಾನಕ್ಕೆ ತೆರಳಿದ್ದು, ಮಧ್ಯಾಹ್ನದವರೆಗೂ ನೀರಾಟವಾಡುತ್ತಿದ್ದು, ಇವರು ಸುಮಾರು ಒಂದು ಕಿಮೀ ದೂರದ ವರೆಗೆ ಈಜಾಡಿಕೊಂಡು ಹೋಗಿದ್ದು, ಮೂವರು ಕಡಲಿಂದ ಮೇಲೆ ಬಂದರೆ ಉಳಿದ ಮೂವರು ಸ್ವಲ್ಪ ಈಜಾಡಿ ಬರುವುದಾಗಿ ಮತ್ತೆ ನೀರಾಟವಾಡುತ್ತಿದಂತೆ ಒರ್ವನನ್ನು ಕಡಲು ತನೊಡಲಿಗೆ ಸೇರಿಸಿಕೊಳ್ಳುತ್ತಿದಂತೆ ಮತ್ತಿಬ್ಬರು ಆತನನ್ನು ರಕ್ಷಿಸಲು ಮುಂದಾಗಿದ್ದು ಆ ಸಂದರ್ಭ ಅವಘಡ ಸಂಭವಿಸಿದೆ.

ಮೇಲಿದ್ದವರು ರಕ್ಷಣೆಗಾಗಿ ಕೂಗಾಡಿದರೂ ಇವರು ಬಹಳ ದೂರ ಇದ್ದರಿಂದ ರಕ್ಷಣೆ ಮಾಡಲು ಕೊಂಚ ವಿಳಂಬವಾಗಿದ್ದು, ಮೂವರನ್ನು ಮೇಲೆತ್ತಲಾಯಿತಾದರೂ, ಅಷ್ಟರಲ್ಲೇ ಇಬ್ಬರು ಇಹ ಲೋಹ ತ್ಯಜಿಸಿದ್ದಾರೆ. ಪವನ್ ಆಸ್ಪತ್ರೆಯಲ್ಲಿ ಚೇತರಿಸಿಕೊಂಡಿದ್ದಾನೆ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article