
ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿ, ನೇಣು ಕುಣಿಕೆ ತುಂಡಾಗಿ ಬಿದ್ದು ಮೃತ್ಯು
Monday, December 30, 2024
ಉಡುಪಿ: ಮನೆಯ ಮೊದಲ ಅಂತಸ್ತಿನ ಮೇಲ್ಛಾವಣಿಯ ಅಡ್ಡಪಟ್ಟಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದ ವ್ಯಕ್ತಿಯೋರ್ವರು ನೇಣು ಕುಣಿಕೆ ತುಂಡಾಗಿ ಬಿದ್ದು ಮೃತಪಟ್ಟ ಘಟನೆ ಸೋಮವಾರ 80 ಬಡಗುಬೆಟ್ಟು ಗ್ರಾಮದ ನವಗ್ರಹ ಕಾಲನಿಯಲ್ಲಿ ಸಂಭವಿಸಿದೆ. ಮೃತ ವ್ಯಕ್ತಿಯನ್ನು ಮೆಲ್ರಾಯ್ (55) ಎಂದು ಗುರುತಿಸಲಾಗಿದೆ.
ನೇಣಿಗೆ ಗೇಣು ಕೊಟ್ಟು ನೇತಾಡುತ್ತಿದ್ದಾಗ ದೇಹ ಭಾರ ತಡೆಯದ ನೇಣಿನ ಹಗ್ಗ ತುಂಡಾದ ಪರಿಣಾಮ ಸುಮಾರು 20 ಅಡಿ ಎತ್ತರದಿಂದ ಬಿದ್ದ ಪರಿಣಾಮ ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟರು.
ಮಣಿಪಾಲ ಪೊಲೀಸರು ಮಹಜರು ನಡೆಸಿ, ಮಣಿಪಾಲ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಲಾಯಿತು.
ಮೃತರು ನವದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಗೆ ದೇಹದಾನದ ವಾಗ್ದಾನಪತ್ರದ ದಾಖಲೆ ಲಭಿಸಿದ್ದು, ಯಕೃತ್ ಕರುಳು, ಕಣ್ಣು, ಚರ್ಮ, ಮೂಳೆಗಳು, ಹೃದಯ ಕವಾಟಗಳು, ರಕ್ತನಾಳಗಳು ದಾನಗೈಯುವ ಉಲ್ಲೇಖ ಇದೆ.