
ಬಿ.ಎಂ. ಬಶೀರ್‌ಗೆ ಡಾ. ಶೇಖರ್ ಅಜೆಕಾರ್ ರಾಜ್ಯ ಪ್ರಶಸ್ತಿ ಪ್ರದಾನ
ಕಾರ್ಕಳ: ವಿದ್ಯಾರ್ಥಿಗಳೇ ಭ್ರಷ್ಟಾಚಾರ ವಿರೋಧಿ ನಿಲುವಿಗೆ ಬದ್ದರಾಗಿ ಉತ್ತಮ ಸಮಾಜ ನಿರ್ಮಾಣಕ್ಕೆ ಪಣತೊಡಿ ಎಂದು ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಅವರು ಕಾರ್ಕಳದ ಎಸ್ ವಿಟಿ ಕಾಲೇಜು ಸಭಾಂಗಣದಲ್ಲಿ ಗುರುವಾರ ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಡಾ. ಶೇಖರ ಅಜೆಕಾರು ರಾಜ್ಯ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಸಾಹಿತಿ ಹಿರಿಯ ಪತ್ರಕರ್ತ ಬಿ ಎಂ ಬಶೀರ್ ಅವರಿಗೆ ಡಾ.ಶೇಖರ್ ಅಜೆಕಾರ್ ರಾಜ್ಯ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ವಿದ್ಯಾರ್ಥಿಗಳು ಸಮಾಜದ ಕಣ್ಣುಗಳು ಅವರೆ ಸಮಾಜವನ್ನು ಬದಲಾಯಿಸುವವರು, ಮಾನವೀಯತೆಯನ್ನು ರೂಢಿಸಿಕೊಂಡು , ಶಾಂತಿ ಸೌಹಾರ್ದ ಭಾವನೆಯನ್ನು ಕಾಪಾಡಿಕೊಳ್ಳಿ ಮನುಷ್ಯ ಹುಟ್ಟುವಾಗ ಮಾನವ ಆಗದೆ ಬದುಕಿನಲ್ಲಿ ಮಾನವೀಯತೆ ಮೌಲ್ಯವನ್ನು ಬೆಳೆಸಿ ಕೊಂಡು ಸಾರ್ಥಕ ಬದುಕನ್ನು ಬದುಕಿ ಮನುಷ್ಯ ನಾಗಿ ಸಾಯವುದೆ ಮಾನವೀಯತೆಯ ಪ್ರತೀಕ ಎಂದರು.
ಪ್ರಶಸ್ತಿ ಸ್ವೀಕರಿಸಿದ ಪತ್ರಕರ್ತ ಬಿ.ಎಂ. ಬಷಿರ್ ಅವರನ್ನು ಅಭಿನಂದನೆ ಸಲ್ಲಿಸಿ ಪ್ರಶಸ್ತಿಯೊಂದಿಗೆ ದೊರೆತ ನಗದನ್ನು ಶೇಖರ್ ಅಜೆಕಾರ್‌ರವರ ಕುಟುಂಬಕ್ಕೆ ನೀಡುವ ಮೂಲಕ ಮಾನವೀಯತೆ ಮೆರದರು
ಎಸ್.ವಿ.ಟಿ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಕೆ.ಪಿ. ಶೆಣೈ ಮಾತನಾಡಿದರು.
ಕಾರ್ಕಳ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮೊಹಮ್ಮದ್ ಶರೀಫ್ ಅಧ್ಯಕ್ಷತೆ ವಹಿಸಿದ್ದರು ಶಿಲ್ಪಿ ರಾಮಚಂದ್ರ ಆಚಾರ್ಯ , ಸಾಹಿತಿ ಜ್ಯೋತಿ ಗುರುಪ್ರಸಾದ್ ಸಾಂದರ್ಭಿಕ ವಾಗಿ ಮಾತನಾಡಿದರು.
ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಹರೀಶ್ ಆಚಾರ್ಯ, ಖಜಾಂಚಿ ಕೆ ಎಂ ಖಲೀಲ್, ಹೆಬ್ರಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಕುಮಾರದ ಮುನಿಯಾಲು ಉಪಸ್ಥಿತರಿದ್ದರು ಮೊಹಮ್ಮದ್ ಷರೀಫ್ ಸ್ವಾಗತಿಸಿದರು. ದೇವದಾಸ್ ಕೆರೆಮನೆ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಹರೀಶ್ ಆಚಾರ್ಯ ವಂದಿಸಿದರು.