
ಕುಂಬ್ಳೆ-ಮೊಗ್ರಾಲ್: ಡಿ.14 ಮತ್ತು 15 ರಂದು ಅಂಚನ್ ಶ್ರೀ ಪಂಜುರ್ಲಿ ದೈವಸ್ಥಾನದಲ್ಲಿ ನೇಮೋತ್ಸವ
Wednesday, December 4, 2024
ಕುಂಬ್ಳೆ: ಕುಂಬ್ಳೆ ಸೀಮೆಯ ಮೊಗ್ರಾಲ್ ಗಾಂಧಿನಗರದಲ್ಲಿರುವ ಅಂಚನ್ ಶ್ರೀ ಪಂಜುರ್ಲಿ ದೈವಸ್ಥಾನದಲ್ಲಿ ಶ್ರೀ ಪಂಜುರ್ಲಿ ಹಾಗೂ ಪರಿವಾರ ದೈವಗಳ ನೇಮೋತ್ಸವವು ಡಿಸೆಂಬರ್ 14 ಮತ್ತು 15 ರಂದು ನಡೆಯಲಿದೆ.
ಡಿಸೆಂಬರ್ 13ರಂದು ರಾತ್ರಿ ಹೋಮ ಬಳಿಕ ಶ್ರೀ ಪಂಜುರ್ಲಿ ದೈವ ದರ್ಶನದ ಮೂಲಕ ಭಂಡಾರ ಏರುವುದು. ಡಿಸೆಂಬರ್ ೧೪ರಂದು ಬೆಳಿಗ್ಗೆ ಶ್ರೀ ಧರ್ಮದೈವದ ನೇಮ, ಬಳಿಕ ಶ್ರೀ ಮೈಸಂದಾಯ ದೈವದ ನೇಮ ನಡೆಯಲಿದೆ. ಮಧ್ಯಾಹ್ನ ಶ್ರೀ ಪಿಲಿಚಂಡಿ ದೈವದ ನೇಮ, ರಾತ್ರಿ ಶ್ರೀ ಪಂಜುರ್ಲಿ ದೈವದ ನೇಮ, ಶ್ರೀ ಕೊಮರಾಯ ದೈವದ ನೇಮ, ನಂತರ ಶ್ರೀ ಬಿಲ್ಲರೆ ದೈವದ ನೇಮ ನಡೆಯಲಿದೆ.
ಡಿಸೆಂಬರ್ 15ರಂದು ಬೆಳಿಗ್ಗೆ ಶ್ರೀ ಕೊರತಿ ದೈವದ ನೇಮ ನಡೆಯಲಿದೆ. ಬಳಿಕ ಭಂಡಾರ ಇಳಿದು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ಅಂಚನ್ ಶ್ರೀ ಪಂಜುರ್ಲಿ ದೈವಸ್ಥಾನದ ಪ್ರಕಟಣೆ ತಿಳಿಸಿದೆ.