
ಪ್ರತಿಭಟನೆಯಲ್ಲಿ ಪತ್ರಕರ್ತರಿಗೆ ನೊವು: ವಿಷಾದ ವ್ಯಕ್ತ
Wednesday, December 4, 2024
ಮಂಗಳೂರು: ಹಿಂದೂ ಹಿತರಕ್ಷಣಾ ಸಮಿತಿ ದಕ್ಷಿಣಕನ್ನಡ ಜಿಲ್ಲೆ ವತಿಯಿಂದ ಇಂದು ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಮಾಧ್ಯಮ ಬಂಧುಗಳಿಗೆ ನೋವುಂಟಾದ ಘಟನೆ ನಡೆದ ಬಗ್ಗೆ ಗಮನಕ್ಕೆ ಬಂದಿರುತ್ತದೆ, ಈ ಘಟನೆ ಬಗ್ಗೆ ನಾವು ವಿಷಾದ ವ್ಯಕ್ತಪಡಿಸುತ್ತೇವೆ ಎಂದು ಹಿಂದೂ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಎಚ್.ಕೆ. ಪುರುಷೋತ್ತಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.