
ಕರಾವಳಿ ಭಾಗದ ದೇವಸ್ಥಾನಗಳಿಗೆ ನಟ ಉಪೇಂದ್ರ ಭೇಟಿ
Sunday, December 29, 2024
ಕುಂದಾಪುರ: ಚಲನಚಿತ್ರ ನಟ-ನಿರ್ದೇಶಕ ಉಪೇಂದ್ರ ಭಾನುವಾರ ಸಾಲಿಗ್ರಾಮದ ಶ್ರೀ ಗುರು ನರಸಿಂಹ ದೇವಸ್ಥಾನಕ್ಕೆ ಆಗಮಿಸಿ ದರ್ಶನ ಪಡೆದರು.
ಸಮೀಪದ ಕೋಟೇಶ್ವರದವರಾದ ಉಪೇಂದ್ರರಿಗೆ ಸಾಲಿಗ್ರಾಮದ ಶ್ರೀ ಗುರು ನರಸಿಂಹ ಕುಲದೇವರೂ ಹೌದು. ಶ್ರೀ ದೇವರಿಗೆ ಅವರು ವಿಶೇಷ ಪೂಜೆ ಸಲ್ಲಿಸಿದರು.
ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಕೆ.ಎಸ್. ಕಾರಂತರು ಶ್ರೀದೇವರ ಪ್ರಸಾದ ನೀಡಿ ಉಪೇಂದ್ರರನ್ನು ಗೌರವಿಸಿದರು.
ಕುಂಭಾಶಿಯ ಆನೆಗುಡ್ಡೆ ಶ್ರೀ ವಿನಾಯಕ ದೇಗುಲಕ್ಕೂ ಆಗಮಿಸಿದ ಅವರು ವಿಶೇಷ ಪೂಜೆ ಸಲ್ಲಿಸಿದರು. ಅನುವಂಶಿಕ ಆಡಳಿತ ಧರ್ಮದರ್ಶಿ ಶ್ರೀರಮಣ ಉಪಾಧ್ಯಾಯ ಶಾಲು ಹೊದೆಸಿ ಗೌರವಿಸಿ, ಶ್ರೀ ದೇವರ ಪ್ರಸಾದ ನೀಡಿ ಆಶೀರ್ವದಿಸಿದರು.