
ಸಿಎ ಪರೀಕ್ಷೆಯಲ್ಲಿ ಮಿಜ್ನಾ ಅಲಿಮಾ ಉತ್ತೀರ್ಣ
Sunday, December 29, 2024
ಮಂಗಳೂರು: ಇನ್ ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಆಕೌಂಟೆಂಟ್ಸ್ ಆಫ್ ಇಂಡಿಯಾ ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ಮಂಗಳೂರು ಪಡೀಲ್ ದರ್ಬಾರ್ ಹಿಲ್‌ನ ಮಿಜ್ನಾ ಅಲಿಮಾ ಇವರು ಉತ್ತೀರ್ಣರಾಗಿದ್ದಾರೆ.
ಮಿಜ್ನಾ ಅಲಿಮಾ ಇವರು ಮಂಗಳೂರು ಪಡೀಲ್ ದರ್ಬಾರ್ ಹಿಲ್ ನಿವಾಸಿಗಳಾದ ಎಸ್.ಎಂ. ಸಲೀಂ ಹಾಗೂ ಫಾತಿಮಾ ನಸೀರಾ ದಂಪತಿಗಳ ಪುತ್ರಿ.
ಮಿಜ್ನಾ ಅಲಿಮಾ ಮಂಗಳೂರಿನ ಸಿಎ ಪಿ. ನರೇಂದ್ರ ಪೈ ಅವರ ಮಾರ್ಗದರ್ಶನದಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಪರೀಕ್ಷೆಗೆ ತಯಾರಿ ನಡೆಸಿದ್ದು, ಪ್ರಸ್ತುತ ಇವರಲ್ಲೇ ತರಬೇತಿ ನಡೆಸುತ್ತಿದ್ದಾರೆ.