.jpeg)
ರಸ್ತೆ ಅಪಘಾತದಲ್ಲಿ ವಿದ್ಯಾರ್ಥಿ ಮೃತ್ಯು
Tuesday, December 31, 2024
ಮಂಗಳೂರು: ಮಂಗಳೂರು ಹೊರವಲಯದ ಅರ್ಕುಳ ಬಳಿ ರಸ್ತೆ ಅಪಘಾತದಲ್ಲಿ ವಿದ್ಯಾರ್ಥಿ, ಯಕ್ಷಗಾನ ಕಲಾವಿದ ದಾರುಣವಾಗಿ ಮೃತಪಟ್ಟ ಘಟನೆ ಮಂಗಳವಾರ ಸಂಭವಿಸಿದೆ.
ವಿಟ್ಲ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಪ್ರವೀತ್ ಕುಮಾರ್(22) ಮೃತಪಟ್ಟ ದುರ್ದೈವಿ.
ಸಸಿಹಿತ್ಲು ಭಗವತೀ ಯಕ್ಷಗಾನ ಮೇಳದ ಸ್ತ್ರೀವೇಷಧಾರಿಯಾಗಿರುವ ಪ್ರವೀತ್ ಕುಮಾರ್ ಮಂಗಳವಾರ ಆಟದ ಕ್ಯಾಂಪ್‌ಗೆ ಬೈಕ್‌ನಲ್ಲಿ ತೆರಳುತ್ತಿದ್ದರು. ಆಗ ಅರ್ಕುಳ ಬಳಿ ಬೈಕ್ ಸ್ಕಿಡ್ ಆಗಿ ರಸ್ತೆಗೆ ಬಿದ್ದಿತ್ತು. ಈ ವೇಳೆ ಐಸ್‌ಕ್ರೀಂ ಸಾಗಿಸುತ್ತಿದ್ದ ವಾಹನ ಪ್ರವೀತ್ ಮೇಲೆ ಸಾಗಿದೆ. ಇದರ ಪರಿಣಾಮ ಪ್ರವೀತ್ ಸ್ಥಳದಲ್ಲೇ ಸಾ ವಿಗೀಡಾಗಿದ್ದಾರೆ.
ಘಟನೆ ಬಗ್ಗೆ ಕಂಕನಾಡಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.